ನಗರದ ಜನರೆ ಟ್ರಾಫಿಕ್ ರೂಲ್ಸ್ನ್ನ ಪೊಲೀಸರು ಯಾರು ಇಲ್ಲ ಅಂತಾ ಬೇಕಾ ಬಿಟ್ಟಿ ರೂಲ್ಸ್ಗಳನ್ನ ಬ್ರೇಕ್ ಮಾಡಿದರೆ ಎಚ್ಚರ.
ನಗರದಲ್ಲಿ ಇಂದಿನಿಂದ ಸ್ವಯಂ ಚಾಲಿತ ಐ.ಟಿ.ಎಂ.ಎಸ್(ITMS) ತಂತ್ರಜ್ಞಾನ ಆಧಾರಿತ ದಂಡದ ವ್ಯವಸ್ಥೆ ಜಾರಿಗೆ ತಂದಿದ್ದಾರೆ,ವಾಹನ ಸವಾರರ ವಿವೇಚನೆಗೆ ಬಾರದಂತೆ, ರೂಲ್ಸ್ ಬ್ರೇಕ್ ಪತ್ತೆ ಮಾಡುವ ಐ.ಟಿ.ಎಂ.ಎಸ್(ITMS)ಬಳಿಕ ಅದಕ್ಕೆ ದಂಡದ ಚಲನ್ ಸಿದ್ದಪಡಿಸಿ ಸಂಬಂಧಿತ ವಾಹನ ಸವಾರರಿಗೆ ರವಾನೆ ಮಾಡಲಿರುವ ಐ.ಟಿ.ಎಂ.ಎಸ್-ಇಂಟಲಿಜೇನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ.ಆರ್ಟಿಫಿಷಿಯಲ್- ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಮೂಲಕ ಐ.ಟಿ.ಎಂ.ಎಸ್ ಕಾರ್ಯ ರ್ನಿವಾಹಿಸುತ್ತದೆ.
ನಗರದ ಪ್ರಮುಖ 50 ಜಂಕ್ಷನ್ ಗಳಲ್ಲಿ ಐ.ಟಿ.ಎಂ.ಎಸ್(ITMS) ಕ್ಯಾಮೆರಾಗಳನ್ನೂ ಅಳವಡಿಕೆ ಮಾಡಲಾಗಿದೆ, ಇದರಲ್ಲಿ ವೇಗ ಮೀತಿ ಉಲ್ಲಂಘನೆ, ಕೆಂಪು ದೀಪ ಉಲ್ಲಂಘನೆ, ಸ್ಪಾಪ್ ಲೈನ್ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್, ಮೊಬೈಲ್ ಬಳಕೆ , ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆಗಳನ್ನೂ ,250 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾ, 80 ರೆಡ್ ಲೈಟ್ ಉಲ್ಲಂಘನೆ ಕ್ಯಾಮೆರಾಗಳು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಐ.ಟಿ.ಎಂ.ಎಸ್ ಸಿಸ್ಟಮ್ ಪತ್ತೆ ಮಾಡುವ ತಂತ್ರಜ್ಞಾನವಾಗಿದೆ .