ಬೆಂಗಳೂರು: ಮಡಿವಾಳ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹಿದ್ ಪಾಷಾ, ಅಪ್ರೋಜ್, ಅರ್ಬಾಜ್ ಬಂಧಿತರು.
ಆರೋಪಿಗಳು ಒಂಟಿಯಾಗಿ ಹೋಗುತ್ತಿರುವವರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು. ಜೊತೆಗೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕದಿಯುತ್ತಿದ್ದರು. ಇವರ ವಿರುದ್ಧ ಮಡಿವಾಳ, ಕೋರಮಂಗಲ, ಆರ್.ಆರ್.ನಗರ ಸೇರಿ ಆರು ಪ್ರಕರಣಗಳು ದಾಖಲಾಗಿದ್ದವು.
ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಂದು ಆಟೋ , ಏಳು ಬೈಕ್, ಮೂರು ಡಿಯೋ, 10 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.