Tuesday, November 29, 2022

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಮಗುವನ್ನು 4ನೇ ಮಹಡಿಯಿಂದ ಎಸೆದು ಕೊಲೆಗೈದ ತಾಯಿ.!

Must read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪಾಪಿ ತಾಯಿಯೊಬ್ಬಳು ತಾನು ಜನ್ಮಕೊಟ್ಟ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದಿದ್ದಾಳೆ.

ಸಂಪಂಗಿ ರಾಮನಗರದ ಅದಿತ್ವ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ನಾಲ್ಕು ವರ್ಷದ ಜೀತಿ ಎಂದು ಗುರುತಿಸಲಾಗಿದೆ. ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಯಿಯ ಈ ಅಮಾನವೀಯ ಕೃತ್ಯಕ್ಕೆ ಜನರು ಕೆಂಡಾಮಂಡಲರಾಗಿದ್ದಾರೆ. ಬುದ್ದಿಮಾಂದ್ಯ ಮಗು ಎಂದು ಹತ್ಯೆ ಮಾಡಲಾಗಿದೆ.

ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್​ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಇದೀಗ ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರು ಆಕೆಯನ್ನು ಕಾಪಾಡಿದ್ದಾರೆ.

ಮಹಿಳೆಯನ್ನು ಹತ್ಯೆ ಮಾಡಿದ ಮಹಿಳೆ ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಳು. ಮೃತ ಮಗುವಿನ ತಂದೆ ಖಾಸಗಿ ಕಂಪನಿಯ ಲ್ಲಿ ಇಂಜಿನಿಯರ್ ಆಗಿದ್ದರು. ಇದೀಗ ಪಾಪಿ ತಾಯಿ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article