ಬೆಂಗಳೂರು: ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಅಕ್ರಮ ಆಸ್ತಿ ಮಾಡಿರುವ ಆರೋಪದ ಮೇಲೆ ನಿಮ್ಸಾನ್ಸ್ ನಿವೃತ್ತ ಹಿರಿಯ ವೈದ್ಯಾಧಿಕಾರಿ ಕೆ.ಮಿಲನ್ ಹಾಗೂ ಅವರ ಕುಟುಂಬಸ್ಥರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ.
ಮಿಲನ್ ಹಾಗೂ ಮೂವರು ಸಹೋದರಿಯರು ಹಾಗೂ ತಾಯಿಗೆ ಒಂದು ವರ್ಷ ಶಿಕ್ಷೆಯೊಂದಿಗೆ 25 ಸಾವಿರ ದಂಡ ಪಾವತಿಸುವಂತೆ ಕೋರ್ಟ್ ತಿಳಿಸಿದೆ.
1/04/ 2002ರರಿಂದ 25/01/ 2013 ಕರ್ತವ್ಯದಲ್ಲಿದ್ದ ಮಿಲನ್ 2014ರ ಫೆಬ್ರವರಿಯಲ್ಲಿ ಅಮಾನತಾದರು.
2008ರಲ್ಲಿ ಮಿಲನ್ ವಿರುದ್ಧ ದೂರು ದಾಖಲಾಗಿದ್ದು, ವಿವೇಕನಗರದ ಮಿಲನ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಆಸ್ತಿ ಅಕ್ರಮವಲ್ಲ, ವ್ಯವಹಾರದಿಂದ ಸಂಪಾದನೆ ಮಾಡಿರೋದು ಎಂದಿದ್ದ ಮಿಲನ್ ಕುಟುಂಬಸ್ಥರು ವ್ಯವಹಾರದ ಸರಿಯಾದ ಲೆಕ್ಕ ತೋರಿಸಲು ವಿಫಲವಾಗಿದ್ದರು. ಅಲ್ಲದೇ ದಾಳಿ ವೇಳೆ ಸಿಕ್ಕಿದ 92 ಲಕ್ಷ ರೂಪಾಯಿಗೂ ಕೂಡ ಲೆಕ್ಕ ನೀಡಿರಲಿಲ್ಲ.
ಈ ಬಗ್ಗೆ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಿಲನ್ ಸೇರಿ ಕುಟುಂಬದ ನಾಲ್ವರಿಗೆ ಒಂದು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.