Monday, January 24, 2022

ಸೋಮಶೇಖರ್ ಪುತ್ರನಿಗೆ ಬ್ಲಾಕ್​​ಮೇಲ್ ಕೇಸ್​: ಸ್ಕ್ರೀನ್ ಶಾಟ್ ಸಮೇತ 8 ಮಂದಿಯ ಹೇಳಿಕೆ ಪಡೆದ ಸಿಸಿಬಿ

Must read

ಬೆಂಗಳೂರು: ಸಚಿವ ಎಸ್.ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್​ಮೇಲ್​ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸಿಸಿಬಿ ಪೊಲೀಸರು ಈವರೆಗೆ ಒಟ್ಟು 8 ಮಂದಿಯ ಹೇಳಿಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಸಚಿವ ಎಸ್.ಟಿ.ಸೋಮಶೇಖರ್, ಸಚಿವರ ಪಿಎಗಳಾದ ಭಾನುಪ್ರಕಾಶ್ ಹಾಗೂ ಶ್ರೀನಿವಾಸ್ ಗೌಡ, ಸೋಮಶೇಖರ್ ಪುತ್ರ ನಿಶಾಂತ್, ಇಂಡಿ ಶಾಸಕ ಯಶವಂತರಾಯ್ ಪಾಟೀಲ್,ಯಶವಂತರಾಯ್ ಪಾಟೀಲ್ ಪುತ್ರಿ , ಆರೋಪಿ ರಾಹುಲ್ ಭಟ್ ಹಾಗೂ ರಾಹುಲ್ ಭಟ್​ಗೆ ಸಿಮ್ ಕೊಟ್ಟಿದ್ದ ಮುಂಬೈನ ರಾಕೇಶ್ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.

ಸಚಿವರ ಪಿಎಗಳಾದ ಭಾನುಪ್ರಕಾಶ್ ಹಾಗೂ ಶ್ರೀನಿವಾಸಗೌಡರ ಮೊಬೈಲ್​​ಗೆ ವಿಡಿಯೋ ಸಂದೇಶ ಬಂದಿದ್ದು, ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ನಿಶಾಂತ್ ದೂರಿನಲ್ಲಿ ಉಲ್ಲೇಖಿಸಿದ್ದರು. ಡಿಸೆಂಬರ್ 25ರಂದು ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿತ್ತು.

ಎಫ್​​ಐಆರ್ ನಂತರ ಸಚಿವ ಎಸ್.ಟಿ ಸೋಮಶೇಖರ್, ನಿಶಾಂತ್, ಪಿಎಗಳಾದ ಶ್ರೀನಿವಾಸ್ ಗೌಡ  ಹಾಗೂ ಭಾನುಪ್ರಕಾಶ್​ರಿಂದ ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್ ಸಮೇತ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು. ನಂತರ ಇಂಡಿ ಶಾಸಕ ಯಶವಂತ ರಾಯ್ ಪಾಟೀಲ್​​ರಿಂದ ಪುತ್ರಿಯ ಮೊಬೈಲ್ ಸಂಖ್ಯೆ ಬಗ್ಗೆ ಹೇಳಿಕೆ ಪಡೆಯಲಾಗಿದ್ದು, ಮುಂಬೈಗೆ ತೆರಳಿದ್ದ ಸಿಸಿಬಿ ತಂಡ ಶಾಸಕರ ಪುತ್ರಿ ಹಾಗೂ ಆರೋಪಿ ರಾಹುಲ್ ಭಟ್ ಗೆಳೆಯ ರಾಕೇಶ್​​ನಿಂದ ಹೇಳಿಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Latest article