Tuesday, October 26, 2021

ಬೊಮ್ಮಾಯಿಯವರೇ ಜನರನ್ನು ಭಾವನಾತ್ಮಕವಾಗಿ ಹಿಡಿದಿಡುವ ಬುದ್ಧಿ ಬಿಡಿ: ಸಿದ್ದರಾಮಯ್ಯ ಕಿಡಿ

Must read

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡಿದ್ದಾರೆ.

ಬೊಮ್ಮಾಯಿಯವರೇ, ಒಬ್ಬ ಅಜ್ಞಾನಿಯಂತೆ ನಾನು ಹಿಂದೂಗಳನ್ನು ಕೊಲ್ಲುತ್ತೇನೆ ಎಂದು ನೀವು ಆರೋಪಿಸಿದ್ದೀರಿ. ನಾನು ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ನೀವು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಹ ಸಡಿಲವಾದ ಹೇಳಿಕೆಗಳನ್ನು ನೀಡುವ ಮೊದಲು ಯೋಚಿಸಿರಬೇಕು. ಇದಕ್ಕಾಗಿ ನಾನು ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಆದರೆ, ನಿಮ್ಮನ್ನು ಸರಿಪಡಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ.

ನಿಮ್ಮ ಆರ್​ಎಸ್​ಎಸ್​ ಸಿದ್ಧಾಂತದಿಂದ ಹೊರಬನ್ನಿ. ಆರೋಪ ಮಾಡುವಾಗ ಪೂರಕ ಅಂಶಗಳಿರಬೇಕು. ಅಂಕಿ-ಅಂಶಗಳನ್ನ ಮುಂದಿಟ್ಟುಕೊಂಡು ಮಾತನಾಡಿ. ನಿಮ್ಮದು ಆಧಾರರಹಿತವಾದ ಆರೋಪ. ಜನರನ್ನು ಭಾವನಾತ್ಮಕವಾಗಿ ಹಿಡಿದಿಡುವ ಬುದ್ಧಿ ಬಿಡಿ. ನಿಮ್ಮ ರಾಜಕೀಯ ಕೋಮುದ್ವೇಷ ಎಲ್ಲರಿಗೂ ಗೊತ್ತಿದೆ. ನಿಜವಾದ ಹಿಂದೂಗಳು ನಿಮ್ಮ ಭಾವನೆ ಅರ್ಥಮಾಡಿಕೊಳ್ತಾರೆ. ನಿಮ್ಮ‌ ಹೇಳಿಕೆಗೆ ಅಂಕಿ-ಅಂಶ ಸಮೇತ ಉತ್ತರ ಇಲ್ಲಿದೆ ನೋಡಿ ಎಂದು ಹಿಂದೂ ಮುಖಂಡರ ಹತ್ಯೆ ಬಗ್ಗೆ ಅಂಕಿ-ಅಂಶ ಸಮೇತ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಪ್ರಕಾಶ್ ಕುಳಾಯಿ, ಕೇಶವ್ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಕಲ್ಲಪ್ಪ ಹಂಡಿಬಾಗ್, ಧನ್ಯಶ್ರೀ, ದಾನಪ್ಪ ಹತ್ಯೆ ಆರೋಪಿಗಳು ಯಾರು? ಬಂಧಿತರೆಲ್ಲರೂ ಸಂಘ ಪರಿವಾರದವರೇ ಇದ್ದರು. ಇದರ ಬಗ್ಗೆ ಯಾಕೆ‌ ನೀವು‌ ಸತ್ಯ ಹೇಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Also read:  ಸಿಎಂ ಬದಲಾವಣೆ ಕೊರೊನಾಗಿಂತಲೂ ದೊಡ್ಡ ಅನಾಹುತಾ: BSY ಪರ ಮಠಾಧೀಶರು

More articles

Latest article