ದರ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​ಗೆ ಕೇಳಿ: ಗೃಹ ಸಚಿವರಿಗೆ ಸಿದ್ದರಾಮಯ್ಯ ಲೇವಡಿ

ದರ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​ಗೆ ಕೇಳಿ: ಗೃಹ ಸಚಿವರಿಗೆ ಸಿದ್ದರಾಮಯ್ಯ ಲೇವಡಿ

ಬೆಂಗಳೂರು: ದರ ಏರಿಕೆ ಬಗ್ಗೆ ನಿಮ್ಮ ಮನೆ ಹೋಂ ಮಿನಿಸ್ಟರ್​ಗೆ ಕೇಳಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನಿಮಗೆ ಮನೆಯ ಸಮಸ್ಯೆ ಹೇಗೆ ಗೊತ್ತಾಗಬೇಕು. ನೀವೇನೋ ಸ್ವಲ್ಪ ಹಣ ಕೊಟ್ಟು ಬಂದು ಬಿಡುತ್ತೀರಾ. ಜನವರಿಯಲ್ಲಿ ಒಂದು ಕಾಫಿಗೆ 15 ರೂ. ಇತ್ತು. ಈಗ ಅದು 30 ರೂಪಾಯಿಯಾಗಿದೆ. 25 ರೂಪಾಯಿ ಇದ್ದ ದೋಸೆ ಈಗ 30 ರೂ. ಆಗಿದೆ ಎಂದರು.

ಈ ವೇಳೆ ಆರಗ ಜ್ಞಾನೇಂದ್ರ ಎಲ್ಲದಕ್ಕೂ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಕಾರಣನಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹೌದು ಡೀಸೆಲ್ ದರ ಹೆಚ್ಚಾದರೆ ಸಾಗಾಣಿಕೆ ದರ ಹೆಚ್ಚಾಗುತ್ತೆ. ಗ್ಯಾಸ್ ದರ ಹೆಚ್ಚಳವಾದರೆ ಆಹಾರದ ಬೆಲೆ ಹೆಚ್ಚಳವಾಗುತ್ತೆ. ದರ ಡಬಲ್ ಆಗಿರುವುದು ಸುಳ್ಳಾ?. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಕೇಳಿ ಎಂದರು.

Related Stories

No stories found.
TV 5 Kannada
tv5kannada.com