'ಬೊಮ್ಮಾಯಿ‌ ನೀನು‌ ಬಹಳ ಹುಷಾರಾಗಿರಪ್ಪ, ನಿನ್ನ ಕಾಲೆಳೆಯುವ ಪ್ರಯತ್ನ ಮಾಡ್ತಿದ್ದಾರೆ'

'ಬೊಮ್ಮಾಯಿ‌ ನೀನು‌ ಬಹಳ ಹುಷಾರಾಗಿರಪ್ಪ, ನಿನ್ನ ಕಾಲೆಳೆಯುವ ಪ್ರಯತ್ನ ಮಾಡ್ತಿದ್ದಾರೆ'

ಬೆಂಗಳೂರು: ಬೊಮ್ಮಾಯಿ‌ ನೀನು‌ ಬಹಳ ಹುಷಾರಾಗಿರಪ್ಪ. ನಿನ್ನ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲೆಳೆದಿದ್ದಾರೆ.

ಸರ್ಕಾರ ತಂದವರು ಯಡಿಯೂರಪ್ಪ. ಪಾಪ ಯಡಿಯೂರಪ್ಪನನ್ನೇ ಮೂಲೆಗೆ ಕೂರಿಸಿದ್ದಾರೆ. ಅವರನ್ನೇ ಅಲ್ಲಿ‌ಕೂರಿಸಿದ್ದಾರೆ ಅಂದರೆ ನಿಮ್ಮನ್ನೂ ಹಾಗೆ ಮಾಡಬಹುದು. ಉಳಿದ ಅವಧಿಗೆ ನೀವೇ ಸಿಎಂ ಆಗಿರಬೇಕು. ಈ ವೇಳೆ ನೀವು ಬಹಳ ಹುಷಾರಗಿರಬೇಕು.

ಇದಕ್ಕೆ ಪ್ರತಿಕ್ರಿಯಿದ ಬೊಮ್ಮಾಯಿ, ಬಹಳ ದಿನಗಳಿಂದ ನಿಮ್ಮನ್ನ ದೆಹಲಿಗೆ ಕಳಿಸೋಕೆ ಪ್ರಯತ್ನ ನಡೆಸುತ್ತಿದ್ದಾರೆ. ನೀವು ಇಲ್ಲಿ ಒಪ್ಪಿಕೊಳ್ಳಲ್ಲ, ಖಾಸಗಿಯಾಗಿ ಒಪ್ಪಿಕೊಳ್ಳುತ್ತೀರಾ ಎಂದು ಹೇಳಿದರು.

Related Stories

No stories found.
TV 5 Kannada
tv5kannada.com