35 ಪೈಸೆ ಬೆಲೆ ಏರಿಕೆ ಮಾಡಿದ್ದಕ್ಕೆ ಕ್ರಿಮಿನಲ್ ಲೂಟ್ ಅಂದಿದ್ರು, ಈಗ ಯಾವ ಪದ ಬಳಸಬೇಕು: ಸಿದ್ದರಾಮಯ್ಯ

35 ಪೈಸೆ ಬೆಲೆ ಏರಿಕೆ ಮಾಡಿದ್ದಕ್ಕೆ ಕ್ರಿಮಿನಲ್ ಲೂಟ್ ಅಂದಿದ್ರು, ಈಗ ಯಾವ ಪದ ಬಳಸಬೇಕು: ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಅವಧಿಯಲ್ಲಿ 35 ಪೈಸೆ ತೈಲ ಬೆಲೆ ಏರಿಕೆ ಮಾಡಿದ್ದಕ್ಕೆ ಕ್ರಿಮಿನಲ್ ಲೂಟ್ ಎಂಬ ಪದ ಬಳಸಿದ್ದರು. ಈಗ ನಾನು ಯಾವ ಪದ ಬಳಸಲಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮನಮೋಹನ್ ಸಿಂಗ್ ಅವಧಿಯಲ್ಲಿ ಪೆಟ್ರೋಲ್ ಮೇಲೆ 9.21ರಷ್ಟು ಸೆಸ್ ಇತ್ತು. ಇಂದು ಪೆಟ್ರೋಲ್​ ಮೇಲೆ 32.98 ರೂ. ಸೆಸ್​ ಹಾಕಲಾಗಿದೆ. ಯುಪಿಎ ಅವಧಿಯಲ್ಲಿ 47 ರೂಪಾಯಿಗೆ ಪೆಟ್ರೋಲ್ ಸಿಗುತ್ತಿತ್ತು. ಕ್ರೂಡ್ ಆಯಿಲ್ ಬೆಲೆ 105 ಡಾಲರ್ ಇತ್ತು. 2012ರಲ್ಲಿ ಡಿಸೇಲ್ ಬೆಲೆ 40.91 ಪೈಸೆಯಿತ್ತು. ಪೆಟ್ರೋಲ್ ಬೆಲೆ 73.13 ಪೈಸೆಯಿತ್ತು.​

2014ರಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆಯಾಯ್ತು. ಆಗ ಪೆಟ್ರೋಲ್​ ಬೆಲೆ 81 ರೂಪಾಯಿಗೆ ಏರಿತು. ಈ ವೇಳೆ ಪೆಟ್ರೋಲ್ ಸೆಸ್ 13 ರೂ. ಏರಿಕೆ ಮಾಡಲಾಯಿತು. ಇವತ್ತು ಬೆಲೆ ಎಷ್ಟಾಗಿದೆ ಎಂದು ಪ್ರಶ್ನಿಸಿದರು.

80 ರೂಪಾಯಿ ಇದ್ದ ಅಡುಗೆ ಎಣ್ಣೆ ಬೆಲೆ ಈಗ 200 ರಿಂದ 250 ರೂಪಾಯಿಗೆ ಏರಿಕೆಯಾಗಿದೆ. ಹೀಗಾದ್ರೆ, ಬಡವರು ಬದುಕುವುದು‌ ಹೇಗೆ?. ಆಯಿಲ್​ ಬಾಂಡ್​ನಿಂದ ಬೆಲೆ ಏರಿಕೆಯಾಗಿದೆ ಅಂತಾರೆ. ಆಯಿಲ್ ಬಾಂಡ್​ಗಳನ್ನು ವಾಜಪೇಯಿ ‌ಮಾಡಿದ್ರು. ಆಗಿನಿಂದಲೂ ಆಯಿಲ್ ಬಾಂಡ್ ಮಾಡಲಾಗುತ್ತದೆ ಎಂದರು.

Related Stories

No stories found.
TV 5 Kannada
tv5kannada.com