Wednesday, June 29, 2022

ಗಾಡಿ ಪಾರ್ಕ್​ ಮಾಡುವ ವಿಚಾರಕ್ಕೆ ಆರಂಭವಾದ ಜಗಳ ಸೆಕ್ಯುರಿಟಿ ಗಾರ್ಡ್ ಕೊಲೆಯಲ್ಲಿ ಅಂತ್ಯ

Must read

ಬೆಂಗಳೂರು: ಗಾಡಿ ಪಾರ್ಕ್​ ಮಾಡುವ ವಿಚಾರಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಗೋದ್ರೆಜ್ ಬಳಿ ನಡೆದಿದೆ.

ಜೂನ್​ 12ರಂದು ಡೆಲಿವರಿ ‌ಬಾಯ್ ಕಾರ್ತಿಕ್ ಕೊಡಿಗೆಹಳ್ಳಿಯ ಗೋದ್ರೆಜ್​ ಅಪಾರ್ಟ್ಮೆಂಟ್​ಗೆ ತೆರಳಿದ್ದಾನೆ. ಈ ವೇಳೆ ಗಾಡಿ ಪಾರ್ಕ್​ ಮಾಡುವ ವಿಚಾರಕ್ಕೆ ಸೆಕ್ಯುರಿಟಿ ಗಾರ್ಡ್​ ಕುಮಾರ್ ನಾಯ್ಕ್ ಹಾಗೂ ಕಾರ್ತಿಕ್​ ನಡುವೆ ಜಗಳ ಆರಂಭವಾಗಿದ್ದು, ಆರೋಪಿ ಸೆಕ್ಯುರಿಟಿ ಗಾರ್ಡ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡಿದ್ದ ಕುಮಾರ್ ನಾಯ್ಕ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಕಾರ್ತಿಕ್​ನನ್ನು ಅಮೃತ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Latest article