Monday, January 24, 2022

ಸಿನಿಮೀಯ ರೀತಿಯಲ್ಲಿ SBI ಬ್ಯಾಂಕ್​ಗೆ ಕನ್ನ ಹಾಕಿದ ಖದೀಮ: ಹಣ, ಚಿನ್ನಾಭರಣ ದೋಚಿ ಎಸ್ಕೇಪ್​

Must read

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್​ ದರೋಡೆ ನಡೆಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ.

ನಿನ್ನೆ ಸಂಜೆ 6ಗಂಟೆ ಸುಮಾರಿಗೆ ಮಡಿವಾಳ ಎಸ್​ಬಿಐ ಬ್ಯಾಂಕ್​ಗೆ ನುಗ್ಗಿದ ವ್ಯಕ್ತಿಯೊಬ್ಬ ಬ್ಯಾಂಕ್​ ಸಿಬ್ಬಂದಿಗೆ ಚಾಕು ತೋರಿಸಿ ನಾಲ್ಕು ಲಕ್ಷ ನಗದು ಹಾಗೂ ಕೈಗೆ ಸಿಕ್ಕ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಮಡಿವಾಳ ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

Latest article