ಆರ್ ಆರ್ ನಗರದ ಕ್ಷೇತ್ರದ ಗಲ್ಲಿಗಲ್ಲಿಯಲ್ಲಿ ಪೋಸ್ಟರ್ ಅಂಟಿಸಿ, ಸಚಿವ ಮುನಿರತ್ನ ವಿರುದ್ಧ ಬಿಡುಗಡೆಯಾದ 1೦ ಸಾವಿರ ಕೋಟಿ ರೂಪಾಯಿಗಳ ರಸ್ತೆ, ಪಾರ್ಕು, ಕೆರೆಗೆ ವಿನಿಯೋಗಿಸಿರುವುದು ಎಂದು ಹೇಳಿದ್ದಾರೆ. 2,000 -3,000 ಕೋಟಿ ಎಲ್ಲಿ ಹೋಯ್ತು ಅಂತ ಪ್ರಶ್ನೆ ಮಾಡಿದ್ದಾರೆ.
ಜನರು ೧೦ಸಾವಿರ ಕೋಟಿ ಕಾಮಗಾರಿಗಳನ್ನು ತೋರಿಸುವುದಾದರೆ, ಉಳಿದ ಹಣ ಎಲ್ಲಿ ಹೋಯ್ತು ಎಂದು ತಿಳಿಸಲು ಒತ್ತಾಯ ಮಾಡಿದ್ದಾರೆ, ಕಾಮಗಾರಿ ತೋರಿಸಿದವರಿಗೆ ಉಡುಗೊರೆ ನೀಡುವ ಅಮಿಷ ಒಡ್ಡಿದ್ದಾರೆ.
ನಿನ್ನೆಯೂ ಶಾಸಕರ ಕಚೇರಿ,ಜ್ಞಾನಭಾರತಿ, ಕೊಟ್ಟಿಗೆಪಾಳ್ಯದಲ್ಲಿ ಪೋಸ್ಟರ್ ಅಂಟಿಸಲಾಗಿತ್ತು ಅದನ್ನು ಸಚಿವ ಮುನಿರತ್ನ ಬೆಂಬಲಿಗರು ಪೋಸ್ಟರ್ನ್ನು ತೆರವು ಮಾಡಿಸಿದ್ದರು. ಆದರೆ ಇಂದೂ ಹಲವೆಡೆ ಅನಾಮಿಕರು ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ.