Tuesday, August 16, 2022

ರಾಜ್ಯದಲ್ಲಿ ಲಾಕ್​ಡೌನ್​ ಸುಳಿವು ಕೊಟ್ಟ ಸಚಿವ ಆರ್​.ಅಶೋಕ್​

Must read

ಬೆಂಗಳೂರು: ಮೂರನೇ ಅಲೆ ಬರೋದು ನಿಶ್ಚಿತ ಎಂಬ ವಾತಾವರಣವಿದೆ. ಬೆಂಗಳೂರನ್ನು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ಜನವರಿ 7ಕ್ಕೂ ಮುನ್ನ ಒಂದು ಸಭೆ ಮಾಡ್ತೇವೆ. ಈ ಸಭೆಯಲ್ಲಿ ಹೊಸ ಟಫ್ ರೂಲ್ಸ್ ತರುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ರೆಡ್​ ಝೋನ್​ನಲ್ಲಿದೆ. ಮುಂದಿನ ವಾರದಲ್ಲಿ ಕೋವಿಡ್ ಟಪ್ ರೂಲ್ಸ್ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ.

ನಂತರ ಬೆಂಗಳೂರಿನಲ್ಲಿ ಕೋವಿಡ್​ಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿ ತರುತ್ತೇವೆ. ತಜ್ಞರು ಮಾಡುವ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡ್ತೇವೆ ಎಂದಿದ್ದಾರೆ.

 

Latest article