ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ ಹಿನ್ನಲೆ ಓರ್ವ ಪಿ.ಎಸ್.ಐ ಹಾಗೂ ಎ.ಎಸ್.ಐ ಸಸ್ಪೆಂಡ್ ಮಾಡಲಾಗಿದೆ. ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ PSI ಅಶೋಕ್ ಠಾಕೂರ್, ಹಾಗೂ ASI ರಮೇಶ್ ಸಸ್ಪೆಂಡ್ ಆಗಿರುವವರಾಗಿದ್ದು ಇವರು ಚಿನ್ನದ ವ್ಯಾಪಾರಿಯ ಬಳಿ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಡಿಸೆಂಬರ್ 03 ರಂದು ತನ್ನ ಜ್ಯುವೆಲ್ಲರಿ ಶಾಪ್ಗೆ ಚಿನ್ನದ ವ್ಯಾಪಾರಿ ಚಿನ್ನ ಕೊಂಡೊಯ್ತಿದ್ದು, ಆತನನ್ನು ತಡೆದ ಪೊಲೀಸರು ದಾಖಲೆಯನ್ನು ಕೇಳಿದ್ದರು. ಚಿನ್ನದ ಎಲ್ಲಾ ದಾಖಲೆಯಿದ್ರು ಚಿನ್ನದ ಬ್ಯಾಗ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಗೆ ಕರೆದೊಯ್ದರು ಠಾಣೆ ದಾಖಲಾತಿ ಬುಕ್ನಲ್ಲಿ ಎಂಟ್ರಿ ಕೂಡಾ ಮಾಡಿರಲಿಲ್ಲ. ತದನಂತರ ಚಿನ್ನದ ವ್ಯಾಪಾರಿಯಿಂದ ಹಣ ಪಡೆದು ಚಿನ್ನದ ಬ್ಯಾಗನ್ನ ಕೊಟ್ಟು ಕಳುಹಿಸಿದ್ದಾರೆ. ಸದ್ಯ ಹಣ ಪಡೆದು ಚಿನ್ನದ ಬ್ಯಾಗನ್ನ ಕೊಟ್ಟು ಕಳಿಸಿರುವ ಆರೋಪದಡಿ ಇವರಿಬ್ಬರು ಸಸ್ಪೆಂಡ್ ಆಗಿದ್ದಾರೆ.