Tuesday, November 29, 2022

PFI ಸಿದ್ದರಾಮಯ್ಯರ ಪಾಪದ ಕೂಸು: ಬಿಎಸ್​ವೈ

Must read

ದೇಶಾದ್ಯಂತ PFI ನಿಷೇಧದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ. PFI ಸಂಘಟನೆಯು ಸಿದ್ದರಾಮಯ್ಯರ ಪಾಪದ ಕೂಸು. ಅವರ ಅಪರಾಧದಿಂದ ಇಷ್ಟೆಲ್ಲಾ ಅನಾಹುತವಾಗಿದೆ. ದೇಶದ ಜನರು ನಮ್ಮ ಜೊತೆಗಿದ್ದಾರೆ. ಇದನ್ನ ಸಿದ್ದರಾಮಯ್ಯಗೆ ಸಹಿಸಲು ಆಗುತ್ತಿಲ್ಲ. ಈ ಹಿನ್ನೆಲೆ ಏನೂ ತೋಚದೆ ಮನಬಂದಂತೆ ಅವರು ಮಾತನಾಡುತ್ತಿದ್ದಾರೆ ಎಂದು ಬಿಎಸ್​ವೈ ಕಿಡಿಕಾರಿದ್ದಾರೆ.
ಈಗಲಾದ್ರೂ ಸಿದ್ದರಾಮಯ್ಯರಿಗೆ ತಮ್ಮ ತಪ್ಪಿನ ಅರಿವಾಗಿ, ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಆದರೆ ಅವರು ಈಗಲೂ ಕೂಡ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಗುರವಾಗಿ ಮಾತನಾಡುವುದನ್ನ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಇನ್ಮುಂದೆಯಾದ್ರೂ ಅವರು ಪ್ರಾಮಾಣಿಕವಾಗಿ ಯೋಚಿಸಿ, ಜಾಗೃತರಾಗಲಿ ಎಂದು ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.
ಇನ್ನು ವಿಪಕ್ಷಗಳಲ್ಲಿ ಸಿದ್ದರಾಮಯ್ಯ ಮಾತ್ರ ಎಲ್ಲರ ಬಗ್ಗೆ ಹಗುರವಾಗಿ ಮಾತಾನಾಡುತ್ತಾರೆ. ಬೇರೆ ಯಾರೂ ಕೂಡ ಈ ರೀತಿಯ ಹೇಳಿಕೆಗಳನ್ನ ಕೊಡುವುದಾಗಲೀ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದಾಗಲಿ ಮಾಡುವುದಿಲ್ಲ. ಸಿದ್ದರಮಾಯ್ಯ ಹುಚ್ಚು-ಹುಚ್ಚಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಸಿದ್ದು ವಿರುದ್ಧ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

Latest article