ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಎಗರಿಸಿದ ಖತರ್ನಾಕ್​ ಕಳ್ಳ

ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಎಗರಿಸಿದ ಖತರ್ನಾಕ್​ ಕಳ್ಳ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕಾರು ಖರೀದಿ ನೆಪದಲ್ಲಿ ಖತರ್ನಾಕ್​ ಕಳ್ಳನೋರ್ವ ಕಾರನ್ನೇ ಕದ್ದೊಯ್ದ ಘಟನೆ ನಡೆದಿದೆ.

ಆಗಸ್ಟ್​ 28ರಂದು ಅಬ್ದುಲ್ ಅಜೀಜ್ ಎಂಬುವವರು ತಮ್ಮ ಹುಂಡೈ ಐ20 ಕಾರನ್ನು ಮಾರಾಟ ಮಾಡುವುದಾಗಿ ಒಎಲ್​ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದೇ ದಿನ ಕಾರನ್ನು ಕೊಂಡುಕೊಳ್ಳುವುದಾಗಿ ಜಗದೀಶ್​ ಪಾಟೀಲ್​ ಎಂಬಾತ ಕರೆ ಮಾಡಿದ್ದ. ಕಾರು ನೋಡೋಕೆ ಬರ್ತೀನಿ, ಎಲ್ಲಿ ಬರಬೇಕು ಎಂದು ಕೇಳಿದ್ದ. ಮಾಲೀಕರು ಜಯನಗರ 4ನೇ ಬ್ಲಾಕ್​ಗೆ ಬರುವಂತೆ ತಿಳಿಸಿದ್ದರು. ಅದರಂತೆ ಸ್ಥಳಕ್ಕೆ ಬಂದ ಆರೋಪಿ ಜಗದೀಶ್​, ಕಾರು ಸೂಪರ್​ ಆಗಿದೆ ಸರ್​. ರೇಟ್​ ಎಷ್ಟು ಎಂದು ಕೇಳಿದ್ದನಂತೆ. ಈ ವೇಳೆ ಅಬ್ದುಲ್​ ಅಜೀಜ್​ 3 ಲಕ್ಷದ 50 ಸಾವಿರಕ್ಕೆ ಕೊಡುತ್ತೇನೆ ಎಂದಿದ್ದರು.

ಈ ವೇಳೆ ಓಕೆ ಸರ್, 1 ಸಾವಿರ ರೂ. ಅಡ್ವಾನ್ಸ್​ ತೆಗೆದುಕೊಳ್ಳಿ ಎಂದು ನೀಡಿದ್ದನಂತೆ. ಬಳಿಕ ಕಾರಿನ ಒರಿಜಿನಲ್​ ದಾಖಲೆಗಳನ್ನು ತೋರಿಸಿ ಎಂದು ಹೇಳಿದ್ದನಂತೆ. ಅಬ್ದುಲ್​ ದಾಖಲೆಗಳನ್ನು ತರಲು ಮನೆಯ ಒಳಗೆ ಹೋದಾಗ, ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರು ಕದ್ದುಕೊಂಡು ಎಸ್ಕೇಪ್​ ಆಗಿದ್ದಾನೆ. ಸದ್ಯ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

Related Stories

No stories found.
TV 5 Kannada
tv5kannada.com