Thursday, January 20, 2022

ಪೊಲೀಸರ ಕಣ್ಣಿಗೂ ಬೀಳದೆ ಶ್ರೀಕಿ ನಾಪತ್ತೆ: ಯಾರ ಸಂಪರ್ಕಕ್ಕೂ ಸಿಗದೆ ನಿಗೂಢ ಸ್ಥಳ ಸೇರಿದ ಹ್ಯಾಕರ್​

Must read

ಬೆಂಗಳೂರು: ರಾಜ್ಯದಲ್ಲಿ ಬಿಟ್​ಕಾಯಿನ್​ ಆರೋಪ ಪ್ರತ್ಯಾರೋಪ ಸದ್ಯ ತಣ್ಣಗಾಗಿದೆ. ಇತ್ತ ಹ್ಯಾಕರ್​ ಶ್ರೀಕಿ ಕೂಡ ಕಣ್ಮರೆಯಾಗಿದ್ದಾನೆ.

ಈ ಹಿಂದೆ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಕಿಯನ್ನು ಜೆ‌ಬಿ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಷರತ್ತು ಬದ್ಧ ಜಾಮೀನನ ಮೂಲಕ ಹೊರಬಂದಿದ್ದ ಶ್ರೀಕಿ, ಪೊಲೀಸರ ಕಣ್ಣಿಗೂ ಕಾಣಿಸದೆ ಮರೆಯಾಗಿದ್ದಾನೆ.

ಈ ಹಿಂದೆ ಸಿಸಿಬಿ ಬಂಧಿಸಿ ಹೊರಬಂದಾಗಲೂ ಕೂಡ ಶ್ರೀಕಿ ಪೋಷಕರಿಗೂ ತಿಳಿಸದೆ ತಲೆಮರೆಸಿಕೊಂಡಿದ್ದ, ಇದೀಗ ಮತ್ತೆ ಶ್ರೀಕೃಷ್ಣ ತನ್ನ ಹಳೆ ಖಯಾಲಿಯನ್ನು ಮುಂದುವರಿಸಿದ್ದಾನೆ.

ಕೋರ್ಟ್ ಷರತ್ತು ಬದ್ಧ ಜಾಮೀನಿನಲ್ಲಿ ಪ್ರತೀ ಶನಿವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಕಳೆದ ಶನಿವಾರ ಶ್ರೀಕಿ ತನಿಖಾಧಿಕಾರಿ ಮುಂದೆ ಹಾಜರಾಗಿಲ್ಲ. ಅಲ್ಲದೆ ಮೊಬೈಲ್​ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ಇನ್ನು ಪೊಲೀಸರು ಕೆಲ ದಿನಗಳ ಕಾಲ ಕಾದು ಕೋರ್ಟ್ ಮುಂದೆ ವರದಿ ನೀಡಲಿದ್ದಾರೆ. ಒಂದು ವೇಳೆ ಹಾಜರಾಗದೆ ಹೋದರೆ ಮತ್ತೆ ಅರೆಸ್ಟ್​ ಆಗುವ ಸಾಧ್ಯತೆಯಿದೆ.

Latest article