Thursday, January 27, 2022

ಪಾದಯಾತ್ರೆ ವೇಳೆ ಶಾಲೆಗೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್​ ವಿರುದ್ಧ ಸುಮೋಟೋ ಕೇಸ್..!

Must read

ಬೆಂಗಳೂರು: ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ಎರಡು ದಿನ ಸಂಪೂರ್ಣಗೊಂಡಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮೊದಲ ದಿನದ ಪಾದಯಾತ್ರೆ ವೇಳೆ ಶಾಲೆ ಮಕ್ಕಳನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ದೂರು ದಾಖಲಿಸಿದೆ. ಡಿಜಿ- ಐಜಿಪಿ‌ ಪ್ರವೀಣ್ ಸೂದ್​ಗೆ ಪತ್ರ ಬರೆದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಅಧ್ಯಕ್ಷರು, ಡಿ.ಕೆ.ಶಿವಕುಮಾರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಭೇಟಿ ನೀಡಿದ್ದು, ಯಾವುದೇ ಕೊರೊನಾ ನಿಯಮ ಪಾಲಿಸದೆ ಶಾಲಾ ಮಕ್ಕಳ ಜೊತೆ ಬೆರೆತಿದ್ದಾರೆ. ಮಾಸ್ಕ್​​ ಕೂಡ ಧರಿಸದೆ ಹತ್ತಾರು ಮಕ್ಕಳ ಗುಂಪಿನೊಂದಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಬಗ್ಗೆ ವಿಚಾರಣೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಬರೆದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಸೂಚನೆ ನೀಡಿದೆ.

Latest article