Tuesday, August 16, 2022

ಭೀಕರ ಅಪಘಾತ: ನನ್ನಮ್ಮ ಸೂಪರ್​ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

Must read

ಬೆಂಗಳೂರು: ಟಿಪ್ಪರ್​ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ನನ್ನಮ್ಮ ಸೂಪರ್​ ಸ್ಟಾರ್​ ಸ್ಪರ್ಧಿ ಸಮನ್ವಿ (6) ಸಾವನ್ನಪ್ಪಿದ್ದಾರೆ.

ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಬಾಲಕಿ ತಾಯಿ ಅಮೃತಾ ನಾಯ್ಡು ಗಂಭೀರ ಗಾಯಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹವನ್ನು ಕಿಮ್ಸ್​ಗೆ ರವಾನಿಸಲಾಗಿದ್ದು, ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್​ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Latest article