Wednesday, June 29, 2022

ಚಾಕುವಿನಿಂದ ಇರಿದು ಸ್ಯಾಂಡಲ್​ವುಡ್​ ಯುವ ನಟನ ಬರ್ಬರ ಕೊಲೆ

Must read

ಬೆಂಗಳೂರು: ಸ್ಯಾಂಡಲ್​ವುಡ್​ ಯುವ ನಟನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆರ್.ಆರ್.ನಗರ ಠಾಣ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ನಡೆದಿದೆ.

ಸತೀಶ್ ವಜ್ರ ಕೊಲೆಯಾದ ದುರ್ದೈವಿಯಾಗಿದ್ದು, ಮನೆಯಲ್ಲೇ ಚಾಕುವಿನಿಂದ ಇರಿದು ಸತೀಶ್ ಹತ್ಯೆ ಮಾಡಲಾಗಿದೆ. ಸತೀಶ್​ ಕನ್ನಡದ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಜೊತೆಗೆ ಸಹನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಘಟನಾ ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸತೀಶ್ ವಜ್ರ ಒಂದು ವರ್ಷದ ಹಿಂದೆ ಪ್ರಥಿಸಿ ಮದುವೆಯಾಗಿದ್ದರು. ಕೆಲ ದಿನಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದ್ದು, ತನ್ನ ಸಹೋದರಿ ಸಾವಿ ಸತೀಶ್​ನೇ ಕಾರಣ ಎಂದು ಬಾಮೈದುನನೇ ( ಸತೀಶ್ ಪತ್ನಿಯ ಸಹೋದರ) ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Latest article