Tuesday, August 16, 2022

ಮೇಕೆದಾಟು ಪಕ್ಷಾತೀತ ಹೋರಾಟ.. ಸರ್ಕಾರದ ಇದನ್ನು ಜಿದ್ದಾಗಿ ಭಾವಿಸಬಾರದು-ಮುಖ್ಯಮಂತ್ರಿ ಚಂದ್ರು

Must read

ಬೆಂಗಳೂರು: ಇದೊಂದು ಪಕ್ಷಾತೀತ ಹೋರಾಟವಾಗಿದೆ. ಈ ಹೋರಾಟದ ರೂವಾರಿಗಳಾದ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನವಿಗೆ ಫಿಲ್ಮ್ ಚೇಂಬರ್​ಗೆ ಸ್ಪಂದಿಸಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ನಮ್ಮ ಉದ್ದೇಶ . ರಾಜ್ಯ ಸರ್ಕಾರದ ಇದನ್ನು ಜಿದ್ದಾಗಿ ಭಾವಿಸಬಾರದು ಎಂದರು.

ಇನ್ನು ಈ ಹೋರಾಟದಲ್ಲಿ ನಮಗೆ ಜೀವ ಬೆದರಿಕೆ ಇರುವ ಕಾರಣ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ. ಆದರೆ ಚಿತ್ರರಂಗದ ಸಂಪೂರ್ಣ ಸಹಕಾರ ಇರಲಿದೆ. ಒಂದು ದಿನ ಫಿಲ್ಮ್ ಚೇಂಬರ್ ಬೆಂಬಲ ಹಾಗೂ ಒಂದು ದಿನ‌ ಕಲಾವಿದರ ಬೆಂಬಲ ಇರಲಿದೆ. ಚಿತ್ರರಂಗದ ಯಾರೇ ಈ ಹೋರಾಟಕ್ಕೆ ಬಂದರೂ ಅವರ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Latest article