Friday, January 21, 2022

ಕೋವಿಡ್ ಕೇಸ್​ಗಳ ಮೇಲೆ ನಮಗೆ ಅನುಮಾನವಿದೆ: ಸಂಸದ ಡಿ.ಕೆ.ಸುರೇಶ್

Must read

ಬೆಂಗಳೂರು: ಪಾದಯಾತ್ರೆ ತಪ್ಪಿಸೋಕೆ ಸರ್ಕಾರ ಪ್ರಯತ್ನಿಸುತ್ತಿದೆ. ಕೋವಿಡ್ ಕೇಸ್​ಗಳ ಮೇಲೆ ನಮಗೆ ಅನುಮಾನವಿದೆ. ಇವರು ಏನ್ಮಾಡ್ತಿದ್ದಾರೆ ಎಲ್ಲವೂ ಗೊತ್ತಿದೆ. ಕೇಸ್ ಹಾಕಲಿ ಎದುರಿಸೋಕೆ ನಾವು ಸಿದ್ಧರಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ರಾಜಕಾರಣ ಮಾಡ್ತಿಲ್ಲ. ಯೋಜನೆ ಜಾರಿ ಮಾಡಲಿ‌ ನಮಗೂ ಸಂತೋಷ ಎಂದರು. ಕಟ್ಟುನಿಟ್ಟಿನ ಕ್ರಮ ಎಂಬ ಅಶ್ವತ್ ನಾರಾಯಣ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರದ್ದೇ ಸರ್ಕಾರವಿದೆ. ಏನು ಬೇಕಾದ್ರೂ ಕ್ರಮ ತೆಗೆದುಕೊಳ್ಳಲಿ. ಇಲ್ಲಿ‌ನಾವ್ಯಾರು ಹೆದರೋರು ಇಲ್ಲ. ನೀರಿಗಾಗಿ ನಾವು ಹೋರಾಟ ಮಾಡ್ತಿರೋದು.

ನಾವು ಹೋರಾಟದಿಂದಲೇ ಬಂದವರು. ಹೋರಾಟವೇ ನಮ್ಮ ಬದುಕಾಗಿದೆ. ಈ ಪಾದಯಾತ್ರೆಯಿಂದ ನಮಗೆ ಯಶಸ್ಸು ಸಿಗಲಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಲೇ ಇದ್ದಾರೆ ಎಂದರು.

Latest article