Thursday, January 27, 2022

ಡಿ.ಕೆ.ಶಿವಕುಮಾರಣ್ಣ ಹೊನ್ನಾಳಿ ಕೋಟೆಯನ್ನು ಭೇದಿಸೋದಕ್ಕೆ ನಿಮಗೆ ಸಾಧ್ಯವೇ ಇಲ್ಲ: ರೇಣುಕಾಚಾರ್ಯ

Must read

ಬೆಂಗಳೂರು: ಡಿ.ಕೆ.ಶಿವಕುಮಾರಣ್ಣ ಹೊನ್ನಾಳಿ ಕೋಟೆ. ಆ ಕೋಟೆಯನ್ನು ಭೇದಿಸೋದಕ್ಕೆ ನಿಮಗೆ ಸಾಧ್ಯವೇ ಇಲ್ಲ. ಹೊನ್ನಾಳಿ-ನ್ಯಾಮತಿ ಜನರು ನನ್ನ ಸುತ್ತ ಕೋಟೆ ಕಟ್ಟಿದ್ದಾರೆ. ಅಂತಹ ಕೋಟೆಯಲ್ಲಿ ನಾನು ವಿಡಿಯೋ ಮಾಡಿಸಿದ್ದೇನೆ ಅಂತಿರಲ್ಲಾ ಎಂದು ಡಿಕೆಶಿ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಹಬ್ಬ ನಡೆದಿದೆ. ಒಂದುವರೆ ಲಕ್ಷ ಜನರು ಅಲ್ಲಿ ಸೇರಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಕ್ಕೆ ರಾಜ್ಯದ ಜನರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದೇನೆ. ನನಗೂ ಇದು ಮುಜುಗರವಾಯಿತು. ಇದು ದಿಢೀರ್ ಕಾರ್ಯಕ್ರಮವಲ್ಲ. ಇಪ್ಪತ್ತು ದಿನಗಳ‌ ಹಿಂದೆ ನಿಗದಿಯಾಗಿತ್ತು ಎಂದರು.

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದಕ್ಕೆ ಸರ್ಕಾರ ಬೇಕಿದ್ದರೆ ನನ್ನ ಮೇಲೂ ಕೇಸ್ ಹಾಕಲಿ. ನನ್ನ ಮೇಲೆ ಕೇಸ್ ಹಾಕಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ಹೊನ್ನಾಳಿ ಜನ ನನ್ನ ಹೊನ್ನಾಳಿ ಹುಲಿ ಅಂತ ಕರೀತಾರೆ. ಪಕ್ಷಕ್ಕೂ, ಸರ್ಕಾರಕ್ಕೂ ಮುಜುಗರ ಆಗೋದು ಬೇಡ. ನನ್ನ ಮೇಲೆ ಗೃಹ ಸಚಿವರು ಕೇಸ್ ಹಾಕಿಸಲಿ ಎಂದರು.

Latest article