Friday, January 21, 2022

‘2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ, ಕೇಂದ್ರದ ಮಾದರಿಯಲ್ಲೇ ನೀವು ಹೊರಹೋಗ್ತಿರಾ’

Must read

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ನಾಟಕೀಯ. ಸರ್ಕಾರ ಅಸ್ತಿರ ಮಾಡುವ ಪ್ರಯತ್ನ. ಬಿಜೆಪಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿದ್ರು ಎಂದರು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಪಾದಯಾತ್ರೆ ಇಷ್ಟವಿರಲಿಲ್ಲ. ಡಿಕೆಶಿ ನಾಯಕರಾಗಿ ಹೊರಹೊಮ್ಮಬಹುದೆಂದು ಒಪ್ಪಿದ್ರು. ಡಿಕೆಶಿ ಸಿಎಂ ಅಭ್ಯರ್ಥಿ ಎಂದು ಒಂದೆಡೆ ಘೋಷಣೆ ಕೂಗುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಸಿಎಂ ಅಂತ ಘೋಷಣೆ ಕೂಗುತ್ತಿದ್ದಾರೆ. ಹೀಗಾಗಿ, ಅಲ್ಲಿ ಸಮನ್ವಯತೆ ಇಲ್ಲ. ಕಾಂಗ್ರೆಸ್​ನವರಿಗೆ ಪಾದಯಾತ್ರೆ ಅಭ್ಯಾಸ ಇರಲಿಲ್ಲ. ಹೇಗಿದ್ರೂ ಬಂಧಿಸ್ತಾರೆ ಅನ್ನೋ ನಂಬಿಕೆಯಿತ್ತು. ಹಿಂದೆ ಯಡಿಯೂರಪ್ಪ ಹೋರಾಟ ಮಾಡಿ ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ತಂದರು.

ಡಿಕೆ ಹೊಸ ಟ್ರಾಕ್ ಪ್ಯಾಂಟ್, ಶೂ ಎಲ್ಲಾ ಖರೀದಿಸಿದ್ದರು. ರ್ಯಾಂಪ್ ವಾಕ್ ಮಾಡಿ ರಿಹರ್ಸಲ್ ಮಾಡ್ತಿದ್ರು. ನಮ್ಮ ಹಳ್ಳಿ ಕಡೆ ತಾಲೀಮು ಮಾಡಿಸ್ತಾರೆ. ಆಮೇಲೆ ನಾಟಕ ಪರದೆ ಮೇಲೆ ತರುತ್ತಿದ್ದರು. ಹಾಗೆಯೇ ಡಿಕೆಶಿ ಪಾದಯಾತ್ರೆ ರಿಹರ್ಸಲ್ ಮಾಡಿದ್ರು. ಕೋರ್ಟ್ ಸೂಚನೆ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ರು. ಹೋದ ಕಡೆಯಲ್ಲೆಲ್ಲ ಗಂಡಸ್ತನ, ಅಂತ ಮಾತಾಡ್ತಿದ್ರು. ಅಧಿಕಾರದಲ್ಲಿ ಇದ್ದಾಗ ಗಂಡಸ್ತನ ತೋರಿಸಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತೋರಿಸಲಿಲ್ಲ. ಈ ಮಾತು ನಿಮಗೆ ಶೋಭೆ ತರುತ್ತದೆಯಾ.? ಎಂದರು.

ಎಲ್ಲಾ ಕಡೆ ರೇಣುಕಾಚಾರ್ಯ ವಿಚಾರ ಜಪಿಸುತ್ತಿದ್ದರು. ಸಿದ್ದರಾಮಯ್ಯ, ಡಿಕೆಶಿ ಅವರನ್ನ ಸ್ವಾಗತಿಸುವೆ. ನಿಮ್ಮ ರೀತಿಯ ಬಂಡತನ ಪ್ರದರ್ಶನ ಮಾಡಿಲ್ಲ. ನಾನು ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ. ಆದರೂ ನನ್ನ ಮೇಲೆ ಮೊಕದ್ದಮೆ ಹಾಕಿ ಅಂತಿದ್ದಾರೆ. ನೀವು ನಾಡಿನ ಜನತೆ ಮುಂದೆ ಬೇಷರತ್ ಕ್ಷಮೆಯಾಚಿಸಿ. 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ. ಕೇಂದ್ರದ ಮಾದರಿಯಲ್ಲೇ ನೀವು ಹೊರಹೋಗ್ತಿರಾ. ಪ್ರತಿಪಕ್ಷದ ಸ್ಥಾನದಲ್ಲೂ ಕೂರಲು ಸಾಧ್ಯವಾಗಲ್ಲ ಎಂದು ಕೈ ನಾಯಕರಿಗೆ ಟಾಂಗ್ ನೀಡಿದರು.

Latest article