ಪಾರ್ಶ್ವವಾಯು ರೋಗಿಗೆ ಬೆಳಿಗ್ಗೆಯಿಂದ ಬೆಡ್ ಸಿಕ್ಕಿಲ್ಲ, ಕೇಳಿದ್ರೆ ವೆಂಟಿಲೇಶನ್ ಇಲ್ಲ ಅಂತಾರೆ: ಹಾಲಪ್ಪ ಕಿಡಿ

ಪಾರ್ಶ್ವವಾಯು ರೋಗಿಗೆ ಬೆಳಿಗ್ಗೆಯಿಂದ ಬೆಡ್ ಸಿಕ್ಕಿಲ್ಲ, ಕೇಳಿದ್ರೆ ವೆಂಟಿಲೇಶನ್ ಇಲ್ಲ ಅಂತಾರೆ: ಹಾಲಪ್ಪ ಕಿಡಿ

ಬೆಂಗಳೂರು: ಪಾರ್ಶ್ವವಾಯು ರೋಗಿಗೆ ಬೆಳಿಗ್ಗೆಯಿಂದ ಬೆಡ್ ಸಿಕ್ಕಿಲ್ಲ. ಕೇಳಿದ್ರೆ ವೆಂಟಿಲೇಶನ್ ಇಲ್ಲ ಎಂದು ಉತ್ತರ ಕೊಡುತ್ತಾರೆ ಎಂದು ವೆಂಟಿಲೇಟರ್ ಸಮಸ್ಯೆ ಬಗ್ಗೆ ಶಾಸಕ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ ಅವರು, ಪಾರ್ಶ್ವವಾಯು ರೋಗಿಯೊಬ್ಬರಿಗೆ ಬೆಳಿಗ್ಗೆಯಿಂದ ಬೆಡ್ ಸಿಕ್ಕಿಲ್ಲ. ಈ ಬಗ್ಗೆ ಕೇಳಿದ್ರೆ ವೆಂಟಿಲೇಶನ್ ಇಲ್ಲ ಎನ್ನುತ್ತಾರೆ. ನಾನು ಶಾಸಕನಾಗಿ ಹಲವು ಪ್ರಯತ್ನ ‌ಮಾಡಿದೆ. ರಾಜ್ಯದಲ್ಲಿ ಇನ್ನೂ ವೆಂಟಿಲೇಶನ್ ಸಮಸ್ಯೆ‌ ಇದ್ಯಾ ಎಂದು ಸಚಿವ ಕೆ. ಸುಧಾಕರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವರು, ಹೌದು ಒಳರೋಗಿಗಳಿಗೆ ವೆಂಟಿಲೇಟರ್ ಭರ್ತಿಯಾಗಿತ್ತು. ಬಂದ ರೋಗಿಗೂ ವೆಂಟಿಲೇಶನ್ ಅವಶ್ಯಕತೆಯಿತ್ತು. ಹಾಗಾಗಿ, ಈಗ ಸೆಂಟ್ ಜಾನ್ಸ್ ಆಸ್ಪತ್ರೆಗೆ ರೋಗಿಯನ್ನು ಕಳುಹಿಸಲಾಗಿದೆ ಎಂದರು.

ಸಚಿವರ ಉತ್ತರಕ್ಕೆ ಕಿಡಿಕಾರಿದ ಹಾಲಪ್ಪ, ವೆಂಟಿಲೇಟರ್ ಇಲ್ಲದೆ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡೆ. ಶಾಸಕನಾಗಿ ನಾನೇ ಸಾಕಷ್ಟು ಕಷ್ಟ ಅನುಭವಿಸಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸಿಎಂ ಬೊಮ್ಮಾಯಿ, ಈ ಬಗ್ಗೆ ಸೂಕ್ತಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

Related Stories

No stories found.
TV 5 Kannada
tv5kannada.com