Friday, January 21, 2022

ಎಸ್.ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್​​ಮೇಲ್ ಕೇಸ್​: ಆರೋಪಿಗೆ ಸಿಸಿಬಿ ಗ್ರಿಲ್​​

Must read

ಬೆಂಗಳೂರು: ಸಚಿವ ಎಸ್.ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್​​ಮೇಲ್ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಆರೋಪಿ ರಾಹುಲ್ ಭಟ್ ಸದ್ಯ ಸಿಸಿಬಿ ವಶದಲ್ಲಿದ್ದು, ಸಿಸಿಬಿ ಪೊಲೀಸರು ಐದು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಸಿಸಿಬಿ ಎಸಿಪಿ ಜಗನ್ನಾಥ್ ರೈ ನೇತೃತ್ವದಲ್ಲಿ ಆರೋಪಿ ರಾಹುಲ್ ಭಟ್ ವಿಚಾರಣೆ ನಡೆಯುತ್ತಿದ್ದು, ಸಿಸಿಬಿ ಕೇಳಿದ ಬಹುತೇಕ ಪ್ರಶ್ನೆಗೆ ರಾಹುಲ್ ಭಟ್ ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ.

ನೆನ್ನೆ ತಡರಾತ್ರಿವರೆಗೂ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ನಿಶಾಂತ್ ಹಾಗೂ ಪಿಎಗಳಾದ ಭಾನುಪ್ರಕಾಶ್ ಹಾಗೂ ಶ್ರೀನಿವಾಸ್ ಗೌಡ ಅವರ ಮೊಬೈಲ್​​ಗೆ ಬಂದಿದ್ದ ಮೆಸೇಜ್ ಮುಂದಿಟ್ಟು ಪ್ರಶ್ನೆ ಮಾಡುತ್ತಿದ್ದು, ರಾಹುಲ್ ಭಟ್ ಮಾತ್ರ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ.

Latest article