ಸಂಸ್ಕೃತಿ ಉಳಿಸುತ್ತದೆ ಎಂದು ಜನರು ಬಿಜೆಪಿ ಸರ್ಕಾರ ಆಯ್ಕೆ ಮಾಡಿದ್ದಾರೆ: ಈಶ್ವರಪ್ಪ

ಸಂಸ್ಕೃತಿ ಉಳಿಸುತ್ತದೆ ಎಂದು ಜನರು ಬಿಜೆಪಿ ಸರ್ಕಾರ ಆಯ್ಕೆ ಮಾಡಿದ್ದಾರೆ: ಈಶ್ವರಪ್ಪ

ಬೆಂಗಳೂರು: ಇಡೀ ಕರ್ನಾಟಕ ರಾಜ್ಯದ ಜನರಲ್ಲಿ ದೇವಸ್ಥಾನ ಒಡೆಯುವ ಆತಂಕ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಇರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶಗಳು ಬೇಕಾದಷ್ಟಿವೆ. ಸಂಸ್ಕೃತಿ ನಂಬಿಕೊಂಡು ಇರುವಂತಹ ಪಕ್ಷ ಬಿಜೆಪಿ. ಬಿಜೆಪಿ ನಮ್ಮ ಸಂಸ್ಕೃತಿ ಉಳಿಸುತ್ತದೆ ಎಂದು ಜನರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಯ್ಕೆ ಮಾಡಿರುವುದು. ಹಾಗಾಗಿ ರಾಜ್ಯದ ಯಾವುದೇ ದೇವಸ್ಥಾನ ತೆರವಿಗೆ ನನ್ನ ಒಪ್ಪಿಗೆಯಿಲ್ಲ. ನಾನು ಈ ಬಗ್ಗೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ ಎಂದರು.

ಇನ್ನು ಕಾಂಗ್ರೆಸ್​ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಎಂದು ಅನಿಸಿದೆಯಲ್ಲ, ಅದು ಮುಖ್ಯ. ಅವರ ಜೊತೆ ನನ್ನ ಸಹಮತವಿದೆ. ದೇವಸ್ಥಾನ ಒಂದನ್ನೇ ಯಾಕೆ ಮುಟ್ಟಿದ್ರು ನನಗೆ ಗೊತ್ತಿಲ್ಲ. ಸರ್ಕಾರದ ಪಾತ್ರ ಇದರಲ್ಲಿ ಇಲ್ಲ ಎಂದರು.

Related Stories

No stories found.
TV 5 Kannada
tv5kannada.com