Thursday, May 19, 2022

ಕರ್ನಾಟಕ ಶಿಕ್ಷಣ ನಗರವಾಗಿದೆ, ಇಲ್ಲಿ ಬಂದ್ರೆ ಭವಿಷ್ಯ ಸಿಗುತ್ತೆ: ಸಚಿವ ಡಾ.ಅಶ್ವಥ್ ನಾರಾಯಣ

Must read

ಬೆಂಗಳೂರು: ಭಾರತ ಸರ್ಕಾರ ಒಂದು ವಾರ ಕಾಲ ಸ್ಟಾರ್ಟ್‌ಅಪ್ ದಿನ ಆಚರಣೆ ‌ಮಾಡ್ತಿದೆ. ಮೋದಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ ಅಂತ ಘೋಷಣೆ ಮಾಡಿದ್ದಾರೆ. ಇದು ದೇಶಕ್ಕೆ ಹೆಚ್ಚು ಶಕ್ತಿ ನೀಡಿದಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸ್ಟಾರ್ಟ್‌ಅಪ್ ವಿಜನ್ ಆರಂಭವಾಗಿತ್ತು. ಸ್ನೇಹಮಯವಾದ ವಾತಾವರಣ ನಮ್ಮ ಇಲಾಖೆಯಲ್ಲಿ ಆಗುತ್ತಿದೆ. 2021ರಲ್ಲಿ 1 ಲಕ್ಷದ 60 ಸಾವಿರ ಕೋಟಿ ಬಂಡವಾಳ ಭಾರತಕ್ಕೆ ಬಂದಿದೆ. ಇದರಲ್ಲಿ ಶೇ.30ಕ್ಕೂ ಹೆಚ್ಚು ಬಂಡವಾಳ ನಮ್ಮ ರಾಜ್ಯಕ್ಕೆ ಬಂದಿದೆ. ಭಾರತದ ಶಕ್ತಿ ವಿಶ್ವದಲ್ಲಿ ಹೆಚ್ಚಾಗಿದೆ.

46 ಪ್ರಶಸ್ತಿಗಳ ಪೈಕಿ 16 ಪ್ರಶಸ್ತಿ ನಮ್ಮ ರಾಜ್ಯಕ್ಕೆ ಬಂದಿವೆ. ಶೇ.30ರಷ್ಟು ಪ್ರಶಸ್ತಿಗಳು ನಮ್ಮ ರಾಜ್ಯಕ್ಕೆ ಬಂದಿವೆ. ಇದು ಖುಷಿ ಪಡುವ ವಿಚಾರ. ಮುಂದಿನ 25 ವರ್ಷದಲ್ಲಿ ವಿಶ್ವಗುರುವಾಗಬೇಕು. ಅದು ಸ್ಟಾರ್ಟ್‌ಅಪ್ ಮೂಲಕವಾಗಬೇಕು. ಇದು ಮೋದಿ ಆಶಯ. ಆ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಎಲ್ಲ ವಲಯದಲ್ಲಿ ಸ್ಟಾರ್ಟ್‌ಅಪ್​ಗಳು ಪ್ರಾರಂಭವಾಗಿವೆ. 150ಕ್ಕೂ ಹೆಚ್ಚು ಸ್ಟಾರ್ಟ್‌ಅಪ್​ಗಳಿಗೆ ನಾವು ಬಂಡವಾಳ ನೀಡಿದ್ದೇವೆ.

ದೇಶದಲ್ಲಿ57 ಸಾವಿರ ಸ್ಟಾರ್ಟ್‌ಅಪ್ ಇವೆ. ನಮ್ಮಲ್ಲಿ 13 ಸಾವಿರ ಸ್ಟಾರ್ಟ್‌ಅಪ್ ಇವೆ. ಎಲ್ಲರಿಗೂ ಶಿಕ್ಷಣ ಬೇಕು. ಅದು ನಮ್ಮ ರಾಜ್ಯದಲ್ಲಿ ಆಗುತ್ತಿದೆ. ಕರ್ನಾಟಕ ಶಿಕ್ಷಣ ನಗರವಾಗಿದೆ, ಇಲ್ಲಿ ಬಂದ್ರೆ ಭವಿಷ್ಯ ಸಿಗುತ್ತೆ. ಇಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ. ವಿಶ್ವ ಕೂಡ ಕರ್ನಾಟಕದತ್ತ ನೋಡುತ್ತಿದೆ. ವಿಶ್ವ ದರ್ಜೆಯ ಸಂಸ್ಥೆಗಳು‌ ನಮ್ಮಲ್ಲಿ ಆಗುವ ಪ್ರಯತ್ನ ನಡೆಯುತ್ತಿವೆ. ಯುವಕರ ಸಬಲೀಕರಣ ಆಗಬೇಕು. ಅದರತ್ತ ಪ್ರಯತ್ನ ನಡೆಸಿದ್ದೇವೆ ಎಂದರು.

 

Latest article