Friday, January 21, 2022

ಭಂಡತನ, ಬಂಡೆತನ ಬೇಡ: ಡಿಕೆಶಿ ವಿರುದ್ಧ ಅಶ್ವಥ್​ ನಾರಾಯಣ್ ಆಕ್ರೋಶ

Must read

ಬೆಂಗಳೂರು: ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಿರಲಿಲ್ಲ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಸಚಿವ ಅಶ್ವಥ್​ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ.

ರೇಣುಕಾಚಾರ್ಯ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿ, ರೇಣುಕಾಚಾರ್ಯ ಕ್ಷಮೆ ಕೋರಿದ್ದಾರೆ. ಅವರು ರಾಜ್ಯದ ಜನರ ಕ್ಷಮೆ ಕೂಡ ಕೇಳಿದ್ದಾರೆ. ಆದರೆ, ಇವರ ತರಹ ಭಂಡತನ ಮಾಡಿಲ್ಲ. ಡಿಕೆಶಿ ಕೂಡ ಹೀಗೆ ಕ್ಷಮೆ ಕೇಳಲಿ ಎಂದರು. ಡಿಕೆಶಿ ಮೌನ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಮಾತನಾಡಿದ್ರೆ ಸಿಕ್ಕಿ ಹಾಕಿಕೊಳ್ತಾರೆ. ಅದು ಅವರ ತಲೆಗೆ ಬಂದಿದೆ. ಮಾತನಾಡದಿದ್ದರೆ ಬಚಾವ್ ಆಗುತ್ತೇನೆ ಅನ್ನಿಸಿದೆ. ಅದಕ್ಕೆ ಮೌನವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರವೇ ನನ್ನನ್ನ ಸೋಂಕಿತನನ್ನಾಗಿ ಮಾಡ್ತಿದೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರು ಎಲ್ಲಿ ಬೇಕಾದರೂ ಸೋಂಕಿತರಾಗಬಹುದು. ಟೆಸ್ಟ್ ಮಾಡಿಸಿದಾಗ ಗೊತ್ತಾಗುತ್ತದೆ. ಡಿಕೆ ಪಾದಯಾತ್ರೆ ಸಮರ್ಥಿಸಿಕೊಳ್ತಿದ್ದಾರೆ. ಭಂಡತನ, ಭಂಡತನ, ಬಂಡೆತನ ಬೇಡ. ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡ್ತೇವೆ ಎಂದರು.

 

Latest article