ಬೆಂಗಳೂರು: ಇನೋವಾ ಕಾರಿನ ವೈಯರ್ ಅನ್ನು ಇಲಿ ಕತ್ತರಿಸಿದ್ದಕ್ಕೆ ವ್ಯಕ್ತಿಯೋರ್ವ 5 ಲಕ್ಷ ಪರಿಹಾರಕ್ಕೆ ಬೇಡಿಕೆಯಿಟ್ಟಿರುವ ಘಟನೆ ಆರ್.ಟಿ ನಗರದ ಕಂಫರ್ಟ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಲಕ್ಷ್ಮೀ ನಾರಾಯಣ್ ಎಂಬ ವ್ಯಕ್ತಿಯ ಇನೋವಾ ಕಾರಿನ ವೈಯರ್ ಅನ್ನು ಇಲಿಯೊಂದು ಕಚ್ಚಿ ತುಂಡು ಮಾಡಿತ್ತು. ಅದಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಲಕ್ಷ್ಮೀ ನಾರಾಯಣ್ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಿಗೆ ತಿಳಿಸಿದ್ದ. ಪರಿಹಾರ ನೀಡಲು ಒಪ್ಪದಿದ್ದಾಗ ಅಪಾರ್ಟ್ಮೆಂಟ್ ಮುಂದೆ ನಿತ್ಯ ಕಸ ಸುರಿದು ರಂಪಾಟ ಮಾಡುತ್ತಿದ್ದ. ಜೊತೆಗೆ ಕೊಲೆ ಬೆದರಿಕೆ ಹಾಕಿದ್ದ.
ಕೊಲೆ ಬೆದರಿಕೆಯಿಂದ ಬೇಸತ್ತ ಅಪಾರ್ಟ್ಮೆಂಟ್ ನಿವಾಸಿಗಳು, ಲಕ್ಷ್ಮೀ ನಾರಾಯಣ್ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಮಾಲೀಕನ ರಂಪಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.