ಬೆಂಗಳೂರು: ಡಿಆರ್ಐ ಅಧಿಕಾರಿಗಳು ( director of revenue intelligence)ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಅತೀ ಹೆಚ್ಚು ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಸಿಟಿ ರೈಲ್ವೆ ಸ್ಟೇಷನ್ ಬಳಿ 112 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಜೊತೆಗೆ ತಮಿಳುನಾಡಿನ ತೇಲಿ ಮೂಲದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಇಥ್ಯೂಪಿಯಾದಿಂದ ಹೆರಾಯಿನ್ ತೆಗೆದುಕೊಂಡು ಬಂದಿದ್ದ ಆರೋಪಿ, ಬೆಂಗಳೂರು ಏರ್ ಪೋರ್ಟ್ ಮೂಲಕ ಸಿಟಿ ರೈಲ್ವೆ ಸ್ಟೇಷನ್ಗೆ ಹೊರಟಿದ್ದ.
ಬೆಂಗಳೂರಿನಿಂದ ದೆಹಲಿಗೆ ತಲುಪಿಸಲು ಪ್ಲಾನ್ ಮಾಡಿಕೊಂಡಿದ್ದ. ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಡಿಆರ್ಐ ಅಧಿಕಾರಿಗಳು ಸಿಟಿ ರೈಲ್ವೆ ಸ್ಟೇಷನ್ ಬಳಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಜೊತೆಗೆ 112 ಕೋಟಿ ಮೌಲ್ಯದ 16 ಕೆಜಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.