Thursday, January 27, 2022

ಸಿದ್ದರಾಮಯ್ಯ ಮತ್ತೆ ಪಾದಯಾತ್ರೆಗೆ ಬರುತ್ತಾರೆ:ಡಿ.ಕೆ.ಶಿವಕುಮಾರ್

Must read

ರಾಮನಗರ: ಸಿದ್ದರಾಮಯ್ಯನವರಿಗೆ ಸ್ಟಂಟ್ ಹಾಕಲಾಗಿತ್ತು. ಕಡಿದಾದ ರಸ್ತೆ ಜೊತೆಗೆ ಪಾದಯಾತ್ರೆ ಶುರು ಮಾಡಿರುವುದು ತಡವಾಗಿತ್ತು. ಹೀಗಾಗಿ, ನಾವೇ ನೀವು ನಡೆಯಬೇಡಿ‌ ಎಂದಿದ್ದೆವು. ಆದರೂ ಭಾಗವಹಿಸಿದ್ದರು. ಹಾಗಾಗಿ ಕಾಲುನೋವು ಕಾಣಿಸಿಕೊಂಡಿದೆ ಅವರು ಮತ್ತೆ ಪಾದಯಾತ್ರೆಗೆ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಹಲವು ಶಾಸಕರು ಹಾಗೂ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದಾರೆ. ಈ ರಾಜ್ಯದ ಜನರಿಗಾಗಿ ನಾವು ಹೊರಟಿದ್ದೇವೆ. ಬಿಜೆಪಿಯವರು ಎಲ್ಲ ತೊಂದರೆ ಮಾಡಿದರು. ಬೆಂಬಲ ವ್ಯಕ್ತಪಡಿಸಿದವರನ್ನ ಸಚಿವರ ಹೆದರಿಸುತ್ತಾರೆ. ಯಾರ್ಯಾರು ಏನೇನು ಡೈಲಾಗ್ ಹೊಡೆದಿದ್ದಾರೆ ಗೊತ್ತಿದೆ.

ಕೆಲವೇ ಕ್ಷಣಗಳಲ್ಲಿ ಸೂರ್ಯ ಉದಯವಾಗ್ತಿದ್ದಾನೆ. ಬೀಸುವಗಾಳಿ, ಸೂರ್ಯನನ್ನ ತಡೆಯೋಕೆ ಆಗುತ್ತಾ? ಇದು ಜನರ‌ ಹೋರಾಟ. ರಾಜಕೀಯಕ್ಕಾಗಿ ನಾವು ಹೋರಾಟ ಮಾಡ್ತಿಲ್ಲ. ಜನರ ಹೋರಾಟ‌ಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಿದೆ. ಚಿತ್ರರಂಗದ ಗಣ್ಯರು, ಸ್ವಾಮೀಜಿಗಳನ್ನ ತಡೆಯುತ್ತಿದ್ದಾರೆ. ಇದರಲ್ಲಿ ನಮ್ಮದೇನು ರಾಜಕಾರಣವಿಲ್ಲ. ಇಲ್ಲಿರುವ ನಮ್ಮ ಕಾರ್ಯಕರ್ತರೇ ನಮಗೆ ಸಾಕು. ಕ್ಷೇತ್ರದ ಜೆಡಿಎಸ್, ಬಿಜೆಪಿ ಎಲ್ಲರೂ ಸಾಥ್ ಕೊಟ್ಟಿದ್ದಾರೆ. ನಮಗೆ ಯಾರು ಬೇಕಾದ್ರೂ ಬೆಂಬಲಿಸಬಹುದು ಎಂದಿದ್ದಾರೆ.

ಎಸ್​ಪಿ ಎಚ್ಚರಿಕೆ ವಿಚಾರವಾಗಿ ಮಾತನಾಡಿ, ಸಿಎಂ ಹೇಳಿದ್ದಾರೆ, ಪಾಪ ಎಸ್​ಪಿ ಏನು ಮಾಡ್ತಾರೆ ಮಾಡಲಿ. ನಾವು ಎಲ್ಲದಕ್ಕೂ ರೆಡಿಯಿದ್ದೇವೆ. ನಮ್ಮನ್ನ ಬಂಧಿಸ್ತಾರಾ ಬಂಧಿಸಲಿ. ಬಹಳಷ್ಟು ಚಿತ್ರರಂಗದ ಗಣ್ಯರು ಬರ್ತಾರೆ ಎಂದರು.

Latest article