ಬೆಂಗಳೂರು: ಗೃಹ ಸಚಿವರಿಗೆ ಅನುಭವವಿಲ್ಲ. ರಸ್ತೆಯಲ್ಲಿ ನಡೆಯೋದಕ್ಕೆ ಇವರ ಅನುಮತಿ ಬೇಕಾ? ಆರಗ ಜ್ಞಾನೇಂದ್ರ ಅವರು ವಯಸ್ಸಲ್ಲಿ ದೊಡ್ಡವರಿರಬಹದು. ಆದರೆ, ರಾಜಕೀಯದಲ್ಲಿ ಅವರು ಇನ್ನೂ ಎಳಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡೋದಕ್ಕೆ ಇವರ ಅನುಮತಿ ಕೇಳಬೇಕಾ? ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ? ಆಫೀಸರ್ನ ಕೂರಿಸಿಕೊಂಡು ಕೇಳಲಿ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಇದ್ದಾಗ ಮೇಕೆದಾಟು ಯೋಜನೆಯ ಡಿಪಿಆರ್ ಮಾಡಿ ಕಳಿಸಿದ್ದು. ಪರಿಸರ ಕ್ಲಿಯರೆನ್ಸ್ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ. ಅದನ್ನು ಸಿದ್ದರಾಮಯ್ಯ, ಡಿಕೆಶಿ ಕೊಡೋದು ಅಲ್ಲ. ಕೊಡಬೇಕಾಗಿರುವುದು ಕೇಂದ್ರ ಸರ್ಕಾರ.
ನನಗೆ ವೈಯುಕ್ತಿಕವಾಗಿ ಏನೂ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ನಿಂತಿದ್ದೆ. ದೇವೇಗೌಡರ ಎದುರು ಅಂದು ಚುನಾವಣೆಗೆ ನಿಲ್ಲಿಸಿದ್ರು. ಚುನಾವಣೆಯಲ್ಲಿ ಸೋತಿರಬಹುದು, ಆದರೆ ನನ್ನ ಹೋರಾಟದಿಂದ ತಾನೇ ನಿಲ್ಲಿಸಿದ್ದು ಎಂದರು.