Tuesday, August 16, 2022

ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ, ಟೆನ್ಶನ್ ಹೆಚ್ಚಾಗಿದೆ: ಕೆಜಿಎಫ್ ಬಾಬು

Must read

ಬೆಂಗಳೂರು: ನನಗೆ ಯಾವುದೇ ಭಯವಿಲ್ಲ. ಇದ್ದರೇ ಒಂದೇ, ಹೋದರೇ ಒಂದೇ. ಆದರೆ ಇಡಿಯವರು, ಸಿಬಿಐಯವರು ಬರುತ್ತಾರೆ ಎಂದು ರಾತ್ರಿ ನಿದ್ದೆ ಬರುತ್ತಿಲ್ಲ. ಜೀವನದಲ್ಲಿ ಟೆನ್ಶನ್ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವನು. ನನಗೆ ಸುಮ್ಮನೆ ಕಿರಿಕಿರಿ ಮಾಡ್ತಿದ್ದಾರೆ. ಇಡಿ, ಐಟಿಯವರು ಕಿರಿಕಿರಿ ಮಾಡ್ತಿದ್ದಾರೆ. ನಾನು 1740 ಕೋಟಿ ಡಿಕ್ಲೇರ್ ಮಾಡಿಕೊಂಡಿದ್ದೇನೆ. ಬೇರೆ ಯಾರೂ ಈ ರೀತಿ ಮಾಡಿಕೊಳ್ಳಲ್ಲ. 40 ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಆದರೂ ಇಡಿಯವರು ನನಗೆ ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ. ನನ್ನ ಹೆಂಡತಿಗೆ ಬೆದರಿಸಿದ್ದಾರೆ.

ನನ್ನ ಹೆಂಡತಿಗೆ ಬೆದರಿಸಿದ್ದಾರೆ. ಹೆಂಡತಿಗೆ ಆಪರೇಷನ್ ಆಗಿದೆ. ಆದರೂ ವಿಚಾರಣೆಗೆ ಕರೆದುಕೊಂಡಿದ್ದೇನೆ. ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಇದ್ದೆ. ಆದರೆ, ಈಗ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಪಾರ್ಟಿಯಲ್ಲೇ ಇರ್ತೇನೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ನಾನು ಕೆಲಸ ಮಾಡ್ತೇನೆ. ಅಲ್ಲಿಂದ ಸ್ಪರ್ಧೆ ಮಾಡಿ ಎಂದು ಜನ ಒತ್ತಾಯ ಮಾಡ್ತಿದ್ದಾರೆ ಎಂದರು.

Latest article