Monday, November 29, 2021

KFC ರೆಸ್ಟೋರೆಂಟ್​ಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮುತ್ತಿಗೆ

Must read

ಬೆಂಗಳೂರು: KFC (Kentucky Fried Chicken) ಯಲ್ಲಿ ಕನ್ನಡ ಭಾಷೆ ಕಡೆಗಣಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಕನ್ನಿಗಾಮ್ ರಸ್ತೆಯ ಕೆಎಫ್​​ಸಿ ರೆಸ್ಟೋರೆಂಟ್​ಗೆ ಮುತ್ತಿಗೆ ಹಾಕಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದ ಪ್ರತಿಭಟನಾಕಾರರು ಕನ್ನಡ ಕಡೆಗಣಿಸುತ್ತಿರುವ ಕೆಎಫ್​ಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೆಎಫ್​ಸಿ ನೀತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ನಿಮಗೆ ಕರ್ನಾಟಕದ ಗಾಳಿ ಬೇಕು, ಇಲ್ಲಿನ ನೀರು ಬೇಕು. ಭಾಷೆ ಬೇಡ ಎಂದರೆ ಹೇಗೆ. ನೀವು ವ್ಯವಹಾರ ಮಾಡಿ ಆದರೆ ಕನ್ನಡ ಮತ್ತು ಕರ್ನಾಟಕಕ್ಕೆ ಬೆಲೆ ಕೊಡಿ. ಇಲ್ಲಿ ಸಿಗುವ ಖಾದ್ಯಗಳ ಹೆಸರು ಹಾಗೂ ಅದರ ದರವನ್ನು ಕನ್ನಡದಲ್ಲಿ ನಮೂದಿಸಿ ಎಂದು ಒತ್ತಾಯಿಸಿದ್ದಾರೆ.

Latest article