Thursday, May 19, 2022

ಕಿರಾತಕ ಚಿತ್ರದ ನಿರ್ದೇಶಕ ನಿರ್ದೇಶಕ ಪ್ರದೀಪ್ ರಾಜ್ ವಿಧಿವಶ

Must read

ಬೆಂಗಳೂರು: ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್(46) ಇಂದು ವಿಧಿವಶರಾಗಿದ್ದಾರೆ.

ಹಲವು ವರ್ಷಗಳಿಂದ ಡಯಾಬಿಟಿಸ್​​ನಿಂದ ಬಳಲುತ್ತಿದ್ದ ಪ್ರದೀಪ್ ರಾಜ್​ಗೆ ಇತ್ತೀಚೆಗೆ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಸಹೋದರ ಪ್ರಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರದೀಪ್ ರಾಜ್, ಯಶ್ ನಟನೆಯ ಕಿರಾತಕ, ಗಣೇಶ್ ನಟನೆಯ 420, ದುನಿಯಾ ವಿಜಯ್ ನಟನೆಯ ರಜನಿಕಾಂತ್ ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಯಶ್ ಅಭಿನಯದ ಕಿರಾತಕ ಸಿನಿಮಾ ಪ್ರದೀಪ್ ರಾಜ್​ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸದ್ಯ ಪ್ರದೀಪ್ ರಾಜ್ ನಿರ್ದೇಶನದ ಕಿರಾತಕ‌ -2 ಸಿನಿಮಾ ರಿಲೀಸ್​​ಗೆ ಸಿದ್ಧವಾಗಿತ್ತು.

ಪ್ರದೀಪ್ ರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಪಾಂಡಿಚರಿಯಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ.

Latest article