Thursday, January 20, 2022

ದೇಶದಲ್ಲಿ 90,928 ಹೊಸ ಕೊರೊನಾ ಪ್ರಕರಣ ಪತ್ತೆ: ಒಂದೇ ದಿನದಲ್ಲೇ ಭಾರಿ ಏರಿಕೆ

Must read

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 90,928 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ಮೂಲಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,51,09,286 ಕ್ಕೆ ಏರಿಕೆಯಾಗಿದೆ. ನಿನ್ನೆ 325 ಜನರು ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401ಕ್ಕೆ ತಲುಪಿದೆ.

ಇದರೊಂದಿಗೆ ಭಾರತದ ಪಾಸಿಟಿವಿಟಿ ದರ ಶೇ 6.43ಕ್ಕೆ ತಲುಪಿದ್ದು, ಆತಂಕ ಉಂಟುಮಾಡಿದೆ. ಇನ್ನೊಂದೆಡೆ ದೇಶದಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.

 

Latest article