Wednesday, June 29, 2022

ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಸಂತೋಷ: ಸಂಸದ ಡಿ.ಕೆ.ಸುರೇಶ್

Must read

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸಂತೋಷ. ರಾಜ್ಯದಲ್ಲಿ ಪಕ್ಷಕ್ಕೆ ಮತ್ತಷ್ಟು ಕಳೆ ಬರಲಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆಗೆ ಟಿಕೆಟ್ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಮ್ಮ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಪಕ್ಷದೊಳಗೆ ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಪ್ರಿಯಾಂಕ ಗಾಂಧಿ ಬಂದರೆ ಸಂತೋಷ. ಚಿಂತನಾ ಶಿಬಿರದಲ್ಲಿ ವಿಶೇಷವಾದ ರೀತಿ ಚರ್ಚೆಯಾಗಿದೆ. ಎಲ್ಲ ವಯೋಮಿತಿಯವರು ಚರ್ಚೆಯಲ್ಲಿ ಭಾಗವಹಿಸಿದ್ರು. ಒಂದಷ್ಟು ಒಳ್ಳೆಯ ಸಲಹೆಗಳು ಬಂದಿದೆ. ಸಾಕಷ್ಟು ಬದಲಾವಣೆಯ ನಿರೀಕ್ಷೆಯಿದೆ.

ಪಠ್ಯಪುಸ್ತಕದಲ್ಲಿ ಆರ್​ಎಸ್ಎಸ್ ವಿಚಾರಧಾರೆ ಕುರಿತು ಪ್ರತಿಕ್ರಿಯಿಸಿ, ಆರ್​ಎಸ್ಎಸ್ ವಿಚಾರಧಾರೆ ತರುವುದು ಗೊತ್ತಿಲ್ಲ. ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡ್ತಾರೆ. ಜನರನ್ನು ಗೊಂದಲದಲ್ಲಿ ಇಡುವ ಪ್ರಯತ್ನ ನಡೆದಿದೆ. ಪಿಎಸ್​ಐ ನೇಮಕಾತಿ ಅಕ್ರಮ ಬಿಟ್ಟಿಲ್ಲ. ಯುನಿವರ್ಸಿಟಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರು. ಅವರಿಗೆ ರಾಜ್ಯದ ಯುವಕರ ಬಗ್ಗೆ ಗಮನ ಇರಬೇಕು. ಸಿಬಿಐಗೆ ನೀಡಲಿ, ನ್ಯಾಯಾಂಗ ತನಿಖೆ ಮಾಡಲಿ. ಸರ್ಕಾರ ತನಿಖೆ ಮಾಡುತ್ತಿಲ್ಲ, ಮುಚ್ಚಿ ಹಾಕುತ್ತಿದೆ ಎಂದರು.

Latest article