Wednesday, June 29, 2022

ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಬಂದರೆ ಚುನಾವಣೆಗೆ ಸಹಾಯವಾಗಲಿದೆ: ಡಿ.ಕೆ.ಶಿವಕುಮಾರ್

Must read

ಬೆಂಗಳೂರು: ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು. ಬಂಡವಾಳ ಹೂಡಿಕೆಗೆ ಮೊದಲಿನಂತೆ ಯಾರೂ ಆಸಕ್ತಿ ತೋರುತ್ತಿಲ್ಲ. ಅಭಿವೃದ್ಧಿ ಅಜೆಂಡಾ ಬಿಟ್ಟಿದ್ದಾರೆ, ಕಮ್ಯುನಲ್ ಅಜೆಂಡಾ ಮುಂದಿಡುತ್ತಿದ್ದಾರೆ. ಅವರ ಬಜೆಟ್ ಬಗ್ಗೆ ಅವರೇ ಮಾತನಾಡ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಳೆಹಾನಿ ವಿಚಾರವಾಗಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್​ ಇಲ್ಲಿಂದ ಹೋದರು. ಆದರೆ, ಬೆಂಗಳೂರಿಗೆ ಏನು ಕೊಟ್ಟರು? ಏನಾದರು ಕೊಡುಗೆ ಇದೆಯಾ? ಈಗ ಮಳೆ ಬಂತು ಅಂತ ಛತ್ರಿ ‌ಕೆಳಗೆ ನೋಡ್ತಿದ್ದಾರೆ. ಉತ್ತಮ ರಸ್ತೆ ಎಲ್ಲಾ ಕಿತ್ತು ಹಾಕ್ತಿದ್ದಾರೆ. ಕುಮಾರಸ್ವಾಮಿ ಕಾಂಗ್ರೆಸ್ ಏನು ಮಾಡಿಲ್ಲ ಎಂದಿರುವುದಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಆರೋಪ ಮಾಡುತ್ತಿರುತ್ತಾರೆ. ಅವರು ಮಾಡಿಕೊಂಡು ಹೋಗಲಿ. ನಮ್ಮ ಕೆಲಸ ನಾವು ಮಾಡ್ತೇವೆ. ಬೆಂಗಳೂರಿಗೆ ಪ್ರತ್ಯೇಕ ಮ್ಯಾನಿಫ್ಯಾಸ್ಟೋ ಮಾಡ್ತೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದವನು, ಬೆಂಗಳೂರು ಮುಖ್ಯ ಅನ್ನೋದು ಗೊತ್ತು ಎಂಧರು.

ವಿಧಾನ ಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿ, 2 ಸ್ಥಾನಕ್ಕೆ ಹಲವರು ಬೇಡಿಕೆ ಇಟ್ಟಿದ್ದಾರೆ. ನಾಳೆ ನಾನು, ಸಿಎಲ್​ಪಿ ಲೀಡರ್ ಮಾತನಾಡ್ತೇವೆ. ಈಗಾಗಲೇ ಒಂದು ಸುತ್ತು ಮಾತನಾಡಿದ್ದೇವೆ. ಚರ್ಚಿಸಿ ಪಟ್ಟಿ ಅಂತಿಮಗೊಳಿಸುತ್ತೇವೆ. ರಾಜ್ಯಸಭೆ ವಿಚಾರಕ್ಕೆ ಪಕ್ಷದಲ್ಲಿ ಪದ್ದತಿ ಇದೆ. ಹೈಕಮಾಂಡ್ ಹೇಳಿದಂತೆ ನಿರ್ಧಾರ ಮಾಡ್ತೇವೆ. ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಉತ್ತರದ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಇಲ್ಲೂ ಬರಲಿ ಎಂಬ ಅಭಿಪ್ರಾಯ. ರಾಜ್ಯಕ್ಕೆ ಬಂದರೆ ಚುನಾವಣೆಗೆ ಸಹಾಯವಾಗಲಿದೆ. ಬಂದರೆ ತಪ್ಪೇನು ಎಂದರು.

ಪಠ್ಯದಿಂದ ಭಗತ್ ಸಿಂಗ್ ಪಾಠ ಕೈಬಿಟ್ಟ ಕುರಿತು ಮಾತನಾಡಿ, ನಮಗೆ ನಮ್ಮ ಇತಿಹಾಸ ಭಗತ್ ಸಿಂಗ್. ಹಿಂದೆ ಏನು ಇತ್ತು ಅದು ಇರಬೇಕು. ರಾಮಾಯಣ ಮಹಾಭಾರತ ಎಲ್ಲ ಇತ್ತು ಇರಬೇಕು. ಈಗ ನಾರಾಯಣ ಗುರು ಪಾಠ ತೆಗೆದಿಲ್ಲ ಅಂತಾರೆ. ಆದರೆ, ತೆಗೆಯುವ ಚಿಂತನೆಯಿತ್ತು. ಅವರ ಟ್ಯಾಬ್ಲೋ ತೆಗೆದಾಗ ಸುನೀಲ್ ಕುಮಾರ್ ದನಿ ಎಲ್ಲಿ ಹೋಗಿತ್ತು. ನಾರಾಯಣ ಗುರು ಇರಲಿ, ಭಗತ್ ಸಿಂಗ್ ಇರಲಿ. ಹಿಂದೆಯಿದ್ದ ಪಠ್ಯ ಈಗ ಇರಬೇಕು, ಅದೇ ನಮ್ಮ ಒತ್ತಾಯ. ನಾರಾಯಣ ಗುರುವನ್ನು ಬದಿಗೆ ಸರಿಸುತ್ತಾ ಬಂದಿದ್ದಾರೆ. ಈಗ ಸುನೀಲ್​ ಕುಮಾರ್ ಹೇಳ್ತಾರೆ, ಆಗ ಅವರು ಎಲ್ಲಿಗೆ ಹೋಗಿದ್ರು ಟಾಂಗ್ ನೀಡಿದರು.

Also read:  ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Latest article