ಹಾದಿ ಬೀದಿಯಲ್ಲಿ ಮಾತನಾಡೋವರಿಗೆ ನಾನು ಉತ್ತರಕೊಡಲ್ಲ - ಸಚಿವ ಮುರುಗೇಶ್ ನಿರಾಣಿ

ಬಿ.ಎಸ್ ಯಡಿಯೂರಪ್ಪ ಅವರು ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ
ಹಾದಿ ಬೀದಿಯಲ್ಲಿ ಮಾತನಾಡೋವರಿಗೆ ನಾನು ಉತ್ತರಕೊಡಲ್ಲ - ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಜನರಿಗೆ ಮರಳು ಕೈಗೆ ಸಿಲುಕುವಂತೆ ಮಾಡುತ್ತೇವೆ. ಹೊಸ ಮರಳು ನೀತಿಯನ್ನ ಜಾರಿಗೆ ತರ್ತಿದ್ದೇವೆ. ಮರಳು ಇವತ್ತು ಸಿಗುತ್ತಿಲ್ಲ, ಬ್ಯಾಗ್ ಮೂಲಕ ಮರಳು ನೀಡಲು ನಿರ್ಧರಿಸಿದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮ ಜೊತೆ ಮಾತನಾಡಿದ ಅವರು, ಬ್ಯಾಗ್ ಮೂಲಕ, ಲಾರಿಗಳ ಮೂಲಕ ಮಾರಾಟಕ್ಕೆ ಅವಕಾಶ. ಎಬಿಸಿ ಎಂದು ಮರಳನ್ನ ಗ್ರೇಡ್ ಮಾಡುತ್ತೇವೆ. ಸ್ಟಾಕ್ ಯಾರ್ಡ್​ಗಳಲ್ಲಿ ಸಪರೇಟ್ ಮಾಡುತ್ತೇವೆ ನಂತರ ಅದನ್ನ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತೇವೆ. ವೇಸ್ಟ್ ಮರಳನ್ನ ಶೋಧಿಸಿ ಅದನ್ನ ಪ್ಯಾಕ್ ಮಾಡುತ್ತೇವೆ. ಎಬಿಸಿ ಎಂದು ಗ್ರೇಡ್ ಮಾಡಿ ಮಾರಾಟ ಮಾಡುತ್ತೇವೆ. ಈ ವಾರ ಮೆಷಿನರಿ ಮ್ಯಾನ್ಯುಫ್ಯಾಕ್ಚರ್ ಸಭೆ ಕರೆದಿದ್ದೇವೆ ಎಂದು ಮಾಹಿತಿ ನೀಡಿದರು.

ಸದ್ಯ ಬ್ಯಾಗ್ ಮಾಡಿದರೆ ಯಾವಾಗ ಬೇಕಾದರು ಸಫ್ಲೈ ಮಾಡಬಹುದು ಇದಕ್ಕೆ ಕಡಿಮೆ ರೇಟ್ ಇರುತ್ತದೆ. ಒಂದು ಟನ್​ಗೆ ೫೦ ರೂ. ಹೆಚ್ಚು ಖರ್ಚು ಬರುತ್ತೆ. ೫ ಲಕ್ಷಕ್ಕಿಂತ ಕಡಿಮೆ ರೇಟಿಗೆ ಮರಳು ನೀಡುತ್ತೇವೆ. ಬಡವರಿಗೆ ರಾಯಲ್ಟಿ ಹಾಕದೆ ಮಾರಾಟ ಮಾಡುತ್ತೇವೆ ಇದರ ಬಗ್ಗೆ ರೇಟ್ ನಿರ್ಧಾರ ಆಗಿಲ್ಲ, ಮೂರು ದಿನದೊಳಗೆ ರೇಟ್ ನಿರ್ಧರಿಸುತ್ತೇವೆ. ಮಣ್ಣು ಮಿಶ್ರಿತ ಪ್ಯಾಕಿಂಗ್​ನಿಂದ ಬಿರುಕು ಬರುತ್ತದೆ ಎಂದಿದ್ದಾರೆ.

ಪಂಚಮಸಾಲಿ ಹೋರಾಟ ದುರ್ಬಳಕೆ ಹಾಗೂ ನಿರಾಣಿ ದುರ್ಬಳಕೆ ಮಾಡಿಕೊಡಿದ್ದಾರೆಂಬ ಯತ್ನಾಳ್ ಅವರ ಆರೋಪದ ಬಗ್ಗೆ ಮಾತನಾಡಿದ ಅವರು, ನನ್ನ ಸಮಾಜದ ಬಗ್ಗೆ ನಾನು ಮಾತನಾಡಲ್ಲ, ಇಲ್ಲಿ ಮಾಡೋಕೆ ಸಾಕಷ್ಟು ಕೆಲಸವಿದೆ. ಯಾರೋ ಮಾತನಾಡಿದ್ರೆ ಉತ್ತರ ಕೊಡೋಕೆ ಆಗಲ್ಲ, ಹಾದಿ ಬೀದಿಯಲ್ಲಿ ಮಾತನಾಡೋವರಿಗೆ ನಾನು ಉತ್ತರಕೊಡಲ್ಲ, ವೀರಶೈವ ಸಮಾಜ ಪ್ರಬುದ್ಧವಾಗಿದೆ. ಯಾರು ದುರ್ಬಲರು ಅನ್ನೋದನ್ನ ನಿರ್ಧಾರ ಮಾಡುತ್ತೆ. ನಾನು ಪಂಚಮಸಾಲಿ ಸಮುದಾಯದವನು. ನೂರಾರು ಸಬ್​ಸೆಕ್ಟರ್ ಗಳು ಸಮಾಜದಲ್ಲಿವೆ. ಅವರಿಗೂ ನ್ಯಾಯ ಕೊಡಿಸಬೇಕಿದೆ. ನಾನು ಯಾರೋ ಪ್ರಶ್ನೆಗೆ ಉತ್ತರ ಕೊಡುವವನಲ್ಲ, ನಮ್ಮದು ಶಿಸ್ತು ಬದ್ಧ ಪಕ್ಷ. ಅವರು ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡ್ತಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ನಾಯಕರ ಬದಲಾವಣೆ ನಮ್ಮಕೈಯಲಿಲ್ಲ, ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬಿ.ಎಸ್ ಯಡಿಯೂರಪ್ಪ ಅವರು ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮುರುಗೇಶ್ ನಿರಾಣಿ ಅವರು ಮಾತನಾಡಿದ್ದಾರೆ.

Related Stories

No stories found.
TV 5 Kannada
tv5kannada.com