Monday, November 29, 2021

ವಿಚಾರಣೆ ಮುಗಿಸಿ ವಾಪಸ್​ ತೆರಳಿದ ಹಂಸಲೇಖ

Must read

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಇದೀಗ ಒಂದು ಗಂಟೆಯ ವಿಚಾರಣೆ ಮುಗಿಸಿ ವಾಪಸ್​ ತೆರಳಿದ್ದಾರೆ.

ಬಸವನಗುಡಿ ಇನ್ಸ್​ಪೆಕ್ಟರ್​ ರಮೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಮಾತನಾಡಿದ ಹಂಸಲೇಖ ಪರ ವಕೀಲ ದ್ವಾರಕಾನಾಥ್, ಇಂದಿನ ವಿಚಾರಣೆ ಮುಗಿದಿದೆ. ಪೊಲೀಸರು ಮುಂದೆ ಯಾವಾಗ ಕರೆಯುತ್ತಾರೋ ಆಗ ಬರಬೇಕಿದೆ. ಮತ್ತೆ ಚಿಚಾರಣೆ ಅವಶ್ಯಕತೆ ಇದ್ದರೆ ಕರೆಸುತ್ತೇವೆ ಎಂದಿದ್ದಾರೆ. ನಾವು ಕಾನೂನು ಮುಖಾಂತರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

Latest article