Friday, January 21, 2022

ಸಂಕ್ರಾಂತಿ ಹಬ್ಬದಂದು ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್: ಗೌರವಧನ ಹೆಚ್ಚಿಸಿದ ಸರ್ಕಾರ

Must read

ಬೆಂಗಳೂರು: ಸಂಕ್ರಾಂತಿ ಹಬ್ಬದಂದು ಅತಿಥಿ ಉಪನ್ಯಾಸಕರಿಗೆ ಗುಡ್​ ನ್ಯೂಸ್​ ಸಿಕ್ಕಿದ್ದು, ಕುಮಾರ್ ನಾಯಕ್ ವರದಿಯಂತೆ ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್, ಅತಿಥಿ ಉಪನ್ಯಾಸಕರು ತಮ್ಮ ‌ಬೇಡಿಕೆ ಸರ್ಕಾರದ ಮುಂದಿಟ್ಟಿದ್ದರು. ಅವರ ಬೇಡಿಕೆಗೆ ಅನುಗುಣವಾಗಿ ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಈ ಸಮಿತಿ ಸರ್ಕಾರಕ್ಕೆ ವರದಿಯನ್ನ ಸಲ್ಲಿಸಿದೆ. ವರದಿಯನ್ನ ಸಿಎಂ ಗಮನಿಸಿದ್ದಾರೆ. ವರದಿಯಂತೆ ಅನುಷ್ಠಾನಕ್ಕೆ ಸಿಎಂ ನಿರ್ಧರಿಸಿದ್ದಾರೆ.

ಅತಿಥಿ ಉಪನ್ಯಾಸಕರ ವೇತನ 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಿಸಲಾಗಿದೆ. ಯುಜಿಸಿ ಕ್ವಾಲಿಪಿಕೇಶನ್ ಇರುವವರಿಗೆ 13 ಸಾವಿರದಿಂದ 32 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದು 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಅನ್ವಯವಾಗಲಿದೆ. ಯುಜಿಸಿ ಇಲ್ಲದೆ 5 ವರ್ಷ ಮೇಲ್ಪಟ್ಟವರಿಗೆ 28 ಸಾವಿರ ನೀಡಲಾಗುವುದು. 5 ವರ್ಷಕ್ಕಿಂತ ಕಡಿಮೆ ಇರುವವರಿಗೆ 25 ಸಾವಿರ ನೀಡಲಾಗುವುದು ಎಂದರು.

ನೌಕರಿ ಕಡ್ಡಾಯ ಮಾಡುವ ಬೇಡಿಕೆ ವಿಚಾರವಾಗಿ ಮಾತನಾಡಿ, ನೌಕರಿ ಖಾಯಂಗೊಳಿಸುವುದು ನಮ್ಮ ಮುಂದಿಲ್ಲ. ವೇತನ‌ ಹೆಚ್ಚಳದ ಬಗ್ಗೆ ಇತ್ತು. ಈಗ ವೇತನ‌ ಹೆಚ್ಚಳ ಮಾಡಿದ್ದೇವೆ. ವರ್ಷಕ್ಕೆ 10 ತಿಂಗಳು ಇವರಿಗೆ ಕೆಲಸವಿರಲಿದೆ ಎಂದರು.

Latest article