Thursday, August 18, 2022

ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ತಾರತಮ್ಯ: ಸಿಎಂ ಮನೆ ಮುಂದೆ ಧರಣಿ ಕೂರುವ ಎಚ್ಚರಿಕೆ ನೀಡಿದ ಹೆಚ್​ಡಿಡಿ

Must read

ಬೆಂಗಳೂರು: ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನದಲ್ಲಿ ತಾರತಮ್ಯ ಮಾಡಿದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.

ದಾಸರಹಳ್ಳಿ ಕ್ಷೇತ್ರ ಭೇಟಿ ನೀಡಿದ ವೇಳೆ ಮಾತನಾಡಿದ ಹೆಚ್​ಡಿಡಿ, ದಾಸರಹಳ್ಳಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಸಹಿಸಲಾಗದ ಹೇಡಿಗಳು ಅಡ್ಡಿ ಮಾಡ್ತಿದ್ದಾರೆ. ನಿಮ್ಮ ಪರವಾಗಿ ಹೋರಾಟ ಮಾಡ್ತೇನೆ. ಯಾವುದೇ ಕಾರ್ಯಕ್ರಮ ರೂಪಿಸುವುದಕ್ಕೆ ಸಿದ್ದನಿದ್ದೇನೆ. ಕ್ಷೇತ್ರಕ್ಕೆ ಅನುದಾನ ನೀಡುವುದಕ್ಕೆ ಪ್ರತಿಯೊಂದು ಹೆಜ್ಜೆಯಲ್ಲಿ ತೊಂದರೆ ಕೊಡ್ತಿದ್ದಾರೆ.

ಸಿಎಂ ಬಳಿ ನಾನೇ ಹೋಗಿ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ರಾಜಕೀಯ ‌ಮಾಡಿದ್ರೆ ಧರಣಿ ಕೂರುತ್ತೇನೆ ಎಂದು ಹೇಳಿದರು.

Latest article