Tuesday, August 16, 2022

ಸಿದ್ದರಾಮಯ್ಯ, ಡಿಕೆಶಿ ಪಕ್ಷ ಸರ್ವನಾಶ ಮಾಡ್ತಾರೆ: ಎಂ.ಡಿ.ಲಕ್ಷ್ಮೀನಾರಾಯಣ್ ಆಕ್ರೋಶ

Must read

ಬೆಂಗಳೂರು: ಸಿದ್ದರಾಮಯ್ಯ, ಡಿಕೆಶಿ ಪಕ್ಷ ಸರ್ವನಾಶ ಮಾಡ್ತಾರೆ. ಇಬ್ಬರನ್ನೂ‌ಕರೆದು ಹೈಕಮಾಂಡ್ ಬುದ್ಧಿ ಹೇಳಬೇಕು. ಇಲ್ಲದೆ ಹೋದರೆ ಕಾರ್ಯಕರ್ತರು ನಿರಾಶರಾಗ್ತಾರೆ ಎಂದು ಮಾಜಿ ಎಂಎಲ್​ಸಿ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಏನೂ ಇಲ್ಲದಂತಾಗುತ್ತದೆ. ಈಗಲಾದರೂ ಹೈಕಮಾಂಡ್ ಮಧ್ಯಪ್ರವೇಶ ಮಾಡಲಿ. ಹಿರಿಯ ನಾಯಕರನ್ನ‌ ಮೂಲೆಗುಂಪು ಮಾಡ್ತಿದ್ದಾರೆ. ಪಕ್ಷ ಕಟ್ಟಿದವರನ್ನ ನೇಪಥ್ಯಕ್ಕೆ ಸರಿಸುತ್ತಿದ್ದಾರೆ. ಕಾಂಗ್ರೆಸ್​​ನಲ್ಲಿ, ಡಿಕೆಶಿ ಗುಂಪುಗಳಿವೆ. ಎಲ್ಲೇ ಹೋದರೂ ಎರಡು ಗುಂಪುಗಳು ಕಾಣುತ್ತಿವೆ.

ಸುಮಾರು 70 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಒಂದು ಬಣ ಸಿದ್ದರಾಮಯ್ಯನ ಪರವಿದೆ. ಇನ್ನೊಂದು ಬಣ ಡಿಕೆಶಿಯದ್ದಿದೆ. ಒಂದು ಬಣ ಸಿದ್ದರಾಮಯ್ಯ ಸಿಎಂ ಮಾಡ್ತೇವೆ ಅನ್ನುತ್ತೆ. ಇನ್ನೊಂದು ಬಣ ಡಿಕೆಶಿ ಸಿಎಂ ಮಾಡ್ಬೇಕು ಅನ್ನುತ್ತೆ. ನಾನು ಈ ರೀತಿ ಬಣ ಸರಿಯಲ್ಲ ಅಂತ ಹೇಳ್ತೇನೆ. ಕಾಂಗ್ರೆಸ್ ಪಕ್ಷ ಅಂತ ಕೆಲಸ ಮಾಡಿ ಎಂದಿದ್ದೇನೆ. ಆದರೆ, ಕಾರ್ಯಕರ್ತರು ಒಪ್ಪೋದಕ್ಕೆ ರೆಡಿ ಇಲ್ಲ.

ಇಬ್ಬರು ನಾಯಕರಿಂದ ಪಕ್ಷ ಹಾಳಾಗುತ್ತದೆ. ನಾನು ಬಿಜೆಪಿಯಲ್ಲೂ ನೋಡಿದ್ದೇನೆ. ಅಲ್ಲಿ ಸರಿ ಇಲ್ಲ ಅಂತ ಇಲ್ಲಿಗೆ ಬಂದವನು. ಆದರೆ, ಇವರಿಬ್ಬರೇ ಕಚ್ಚಾಡ್ತಾರೆ. ನಾನು ನೊಂದು ಹೇಳ್ತಿದ್ದೇನೆ. ಇಲ್ಲಿಯವರೆಗೆ ದಲಿತ ಸಿಎಂ ಮಾಡಿಲ್ಲ. ಇಬ್ಬರನ್ನು ಬಿಟ್ಟು ಪರಮೇಶ್ವರ್ ಸಿಎಂ ಮಾಡಬೇಕು. ಪರಮೇಶ್ವರ್ ದಲಿತ ಸಮುದಾಯದ ನಾಯಕ. ಜೊತೆಗೆ ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದವರು.

ಇಬ್ಬರಿಗೂ ಬೇಡ, ಪರಮೇಶ್ವರ್​ಗೆ ಸಿಎಂ ಮಾಡಿ. ನನಗೆ ತುಂಬಾ ಅಸಮಾಧಾನವಿದೆ. ತುರುವೇಕೆರೆ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ. ಎಂಎಲ್​ಸಿ ಮಾಡ್ತೇವೆಂದು ಕೈಕೊಟ್ಟರು. ನಾನು‌ ಕ್ಷೇತ್ರದಲ್ಲಿ ಸಂಘಟನೆ ಜೋರಾಗಿ ಮಾಡಿದ್ದೆ. ನನ್ನಂತಹ ಹಲವು ಹಿರಿಯರಿಗೆ ಅನ್ಯಾಯವಾಗಿದೆ ಎಂದು ಸಿದ್ದು, ಡಿಕೆಶಿ ವಿರುದ್ಧ ಎಂಡಿಎಲ್ ನೇರವಾಗಿ ಆರೋಪಿಸಿದ್ದಾರೆ.

 

Latest article