Thursday, January 20, 2022

ಸುಳ್ಳು ಆರೋಪದ ಮೂಲಕ ಕಾಂಗ್ರೆಸ್ ಜನತೆ ಮುಂದೆ ಬೆತ್ತಲಾಗಿದೆ: ಅಶ್ವತ್ ನಾರಾಯಣ್

Must read

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಬಂದ ಮೇಲೆ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮೂಲಕ ಜನತೆ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ ಎಂದು ಮಾಜಿ ಎಂಎಲ್​ಸಿ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್​ಕಾಯಿನ್ ಬಗ್ಗೆ ಈಗ ಸುದ್ದಿಯಿಲ್ಲ. ಯಾವಾಗ ನಲಪಾಡ್​ ಹೆಸರು ಬಂತೋ ಅವಾಗಿನಿಂದ ಕಾಂಗ್ರೆಸ್ ಸುಮ್ಮನಾಗಿದೆ. ಸಿದ್ದರಾಮಯ್ಯ ಅವರು ಸುಮ್ಮನೆ ಆರೋಪ ಮಾಡುತ್ತಾರೆ. ಕೋವಿಡ್ ವಿಚಾರದಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದರು. ಅದು ಸುಳ್ಳಾಯ್ತು.

ಶೇ. 40ರಷ್ಟು ಕಮಿಷನ್​ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿಗೆ ಇವರೇ ಪತ್ರ ಬರೆದಿದ್ದಾರೆ. 650 ಕೋಟಿ ರೂ. ಗೋವಿಂದ್ ರಾಜು ಅವರ ಡೈರಿನಲ್ಲಿತ್ತು. ಎಸ್​ಜಿ, ಆರ್​ಜಿ, ಎಪಿ ಅವರಿಗೆ ಕೋಟಿ ಕೋಟಿ ಕೊಟ್ಟಿದ್ದೇವೆ ಎಂದು. ಸಿದ್ದರಾಮಯ್ಯ, ಡಿಕೆಶಿ ಸುಖಾಸುಮ್ಮನೆ ಮಾತಾಡುತ್ತಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಉಗ್ರಪ್ಪ, ಸಲೀಂ ಅಹಮ್ಮದ್ ಮಾತಾಡಿದಕ್ಕೆ ಸಲೀಂ ಅವರನ್ನು ತೆಗೆದಿದ್ರೆ, ಅಲ್ಲಿಗೆ ಅವರು ಆಡಿರುವ ಮಾತುಗಳು ಸತ್ಯವಾದದ್ದು. 2016-17ರಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಈ ಅವ್ಯವಹಾರ ನಿಮ್ಮ ಕಾಲದಲ್ಲಿ ಆಗಿರುವುದು. ಜನರನ್ನು ದಿಕ್ಕು ತಪ್ಪಿಸುತ್ತಿದ್ದೀರಿ ಎಂದರು.

Latest article