Friday, January 21, 2022

ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವ ಬಿಜೆಪಿಯವರು‌ ಶೋಷಿತರ ಪರವೋ..ಶೋಷಕರ ಪರವೋ?-ದಿನೇಶ್​ ಗುಂಡೂರಾವ್

Must read

ಬೆಂಗಳೂರು; party with difference ಎಂದು ಹೇಳಿಕೊಳ್ಳುವ ಬಿಜೆಪಿ ಉ.ಪ್ರದೇಶ ಚುನಾವಣೆಯಲ್ಲಿ ಕ್ರಿಮಿನಲ್‌ಗಳಿಗೆ,ಅತ್ಯಾಚಾರಿಗಳಿಗೆ, ಸ್ತ್ರೀ ಪೀಡಕರಿಗೆ ಟಿಕೆಟ್ ‌ಕೊಟ್ಟರೆ, ಕಾಂಗ್ರೆಸ್ ಉನ್ನಾವ್ ಅತ್ಯಾಚಾರ ಸಂತ್ತಸ್ತೆಯ ತಾಯಿಗೆ ಸೇರಿದಂತೆ ಇನ್ನಿತರ ಅಪರಾಧಗಳಲ್ಲಿ ಸಂತ್ರಸ್ತರಾದವರಿಗೆ ಟಿಕೆಟ್ ನೀಡಿದೆ. ಇದೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉ.ಪ್ರದೇಶ ಚುನಾವಣೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಇತರೆ ಪಕ್ಷಗಳಿಗೆ ಮಾದರಿಯಾಗಿದೆ. ಕಾಂಗ್ರೆಸ್ ಯಾವಾಗಲೂ ಶೋಷಿತ ಹಾಗೂ ದಮನಿತರ ಪರ ಎಂಬುವುದಕ್ಕೆ ಇದೊಂದು‌ ನಿದರ್ಶನ.
ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವ ಬಿಜೆಪಿಯವರು‌ ಶೋಷಿತರ ಪರವೋ.? ಶೋಷಕರ ಪರವೋ.? ಎಂದು ಪ್ರಶ್ನಿಸಿದ್ದಾರೆ.

ಯುಪಿ ಚುನಾವಣೆಯ ಟಿಕೆಟ್ ಘೋಷಣೆಯಲ್ಲಿ‌ ಕಾಂಗ್ರೆಸ್ ಶೇ. 40ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದೆ. ಈ ಮಹಿಳೆಯರಲ್ಲಿ ಸಂತ್ರಸ್ತೆಯರಿಗೆ, ಹೋರಾಟಗಾರರಿಗೆ, ಆಶಾ ಕಾರ್ಯಕರ್ತೆಯರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇದು ಕಾಂಗ್ರೆಸ್‌ನ ನೈಜ ಬಣ್ಣ. ಮಹಿಳೆಯರನ್ನು ತುಚ್ಛವಾಗಿ ಕಾಣುವ ಬಿಜೆಪಿ ಎಂದಾದರೂ ಈ ರೀತಿಯ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆಯೇ? ಎಂದಿದ್ದಾರೆ.

Latest article