Thursday, January 27, 2022

ಕಾಂಗ್ರೆಸ್​ನವರು ರಾಜ್ಯದಲ್ಲಿ ಹೊಸದಾಗಿ ರಾಜಕೀಯ ಶುರು ಮಾಡಿದ್ದಾರೆ: ಹೆಚ್​ಡಿಕೆ

Must read

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಿಂದ ನಮಗೆ ಆತಂಕ ಇಲ್ಲ. ನಮ್ಮ ನಡಿಗೆ ಕೃಷ್ಣೆ ಕಡೆಗೆ ಮಾಡಿ ಐದು ವರ್ಷದಲ್ಲಿ ಏನು ಬಳಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ರಾಜ್ಯದಲ್ಲಿ ಹೊಸದಾಗಿ ರಾಜಕೀಯ ಶುರು ಮಾಡಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ಕೇಳೋದು. 2013ರಲ್ಲಿ ನೀರಾವರಿ ಯೋಜನೆಗಳಿಗೆ ಆದ ಪ್ರತಿಫಲ ಏನು? ನಾನು ಎರಡನೇ ಬಾರಿ ಸಿಎಂ ಆದಾಗ ಅವತ್ತಿನ ಭೂಸಾರಿಗೆ, ಜಲಸಂಪನ್ಮೂಲ ಸಚಿವ ಗಡ್ಕರಿಯವರನ್ನ ಭೇಟಿ ಮಾಡಿ ಮೇಕೆದಾಟು ಯೋಜನೆ ಸೇರಿ ಹಲವಾರು ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೆ. ಅಧಿಕಾರಿಗಳು ನಮ್ಮ ಜೊತೆ ಇದ್ದರು. ಮೇಕೆದಾಟು ವಿಷಯದಲ್ಲಿ ಮನವಿ ಮಾಡಿದ್ದೆ.
2018ರ ಆಗಸ್ಟ್​ 4ರಂದು ಪ್ರಾಥಮಿಕ ವರದಿ ಸಿದ್ದಪಡಿಸಲಾಗಿತ್ತು ಎಂದರು.

ಜಲಧಾರೆ ಯಾತ್ರೆ ಬಗ್ಗೆ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ಕಿರುಕುಳ, ಅನ್ಯಾಯವನ್ನ ಜನರ ಮುಂದೆ ತೆಗೆದುಕೊಂಡು ಹೋಗೋಲು ತೀರ್ಮಾನಿಸಿದ್ದೆವು. ನಮ್ಮ ರಾಜ್ಯದ ನೀರು ನಮಗಿಂತ ಬೇರೆ ರಾಜ್ಯಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ತಮಿಳುನಾಡು, ಆಂದ್ರಪ್ರದೇಶ, ಕೇರಳ, ಮಹಾರಾಷ್ಟ್ರ ರಾಜ್ಯಗಳು ನಮ್ಮ ಮೇಲೆ ಕಾನೂನು ಹೋರಾಟ ಮಾಡುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ರಾಜ್ಯ ಜನತೆಗೆ ಮಾಯಾಜಿಂಕೆ ಇದ್ದ ಹಾಗೆ. ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನಕ್ಕೆ ಅನ್ಯಾಯ ಮಾಡ್ತಿವೆ ಎಂದರು.

Latest article