ಬೆಂಗಳೂರು: ಸಂಪ್ ತೊಳೆಯಲು ತೆರಳಿದ್ದ ತಂದೆ ಮಗ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆರ್ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ನಡೆದಿದೆ. ರಾಜು (36) ಹಾಗೂ ಸೈನತ್ (10) ಮೃತ ದುರ್ದೈವಿಗಳು.
ಇಂದು ಬೆಳಗ್ಗೆ 8ಗಂಟೆ ಸುಮಾರಿಗೆ ರಾಜು ಸಂಪ್ ತೊಳೆಯಲು ತೆರಳಿದ್ದರು, ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪ್ಪನ ಚೀರಾಟ ಕಂಡು ಸಂಪ್ ಬಳಿ ತೆರಳಿದ ಸೈನತ್ ಕೂಡ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾನೆ.
ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.