Monday, November 29, 2021

ನಕಲಿ ನೋಟು ದಂಧೆ ಭೇದಿಸಿದ ಪೊಲೀಸರು: ಬರೋಬ್ಬರಿ 6 ಕೋಟಿ ಮೌಲ್ಯದ ಜೆರಾಕ್ಸ್ ನೋಟುಗಳು ವಶ

Must read

ಬೆಂಗಳೂರು: ನಕಲಿ ನೋಟುಗಳನ್ನ ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಖದೀಮರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ದಯಾನಂದ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಬ್ಲಾಕ್ ಆ್ಯಂಡ್​​ ವೈಟ್ ದಂಧೆ ನಡೆಸಲು ಸಂಚು ರೂಪಿಸಿದ್ದು, ನಿಷೇಧಿತ ನೋಟುಗಳ ಬದಲಾವಣೆ ಮಾಡುತ್ತೇವೆಂದು ವಂಚನೆ ಮಾಡಲು ಯತ್ನಿಸಿದ್ದಾರೆ. ಮೊದಲಿಗೆ 35 ಲಕ್ಷ ಮೌಲ್ಯದ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಆ್ಯಂಡ್​ ವೈಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 1 ಸಾವಿರ ಹಾಗೂ 500 ಮುಖಬೆಲೆಯ 70 ಲಕ್ಷ ನಿಷೇಧಿತ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ವಿಚಾರಣೆ ವೇಳೆ ಆರೋಪಿಗಳು ಮತ್ತಷ್ಟು ವಿಚಾರವನ್ನು ಬಾಯ್ಬಿಟ್ಟಿದ್ದು, ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದಿದ್ದಾರೆ. ಕಾಸರಗೋಡಿಗೆ ಹೋದಾಗ 6 ಕೋಟಿ ಮೌಲ್ಯದ ಜೆರಾಕ್ಸ್ ನೋಟುಗಳು ಹಾಗೂ16 ಮೂಟೆ ಪೇಪರ್​ಗಳು ಪತ್ತೆಯಾಗಿದೆ. ಸದ್ಯ ಎಲ್ಲಾ ನಕಲಿ ನೋಟ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article