Thursday, August 18, 2022

ಮೆಡಿಕಲ್ ವೀಸಾದಡಿ ಬೆಂಗಳೂರಿಗೆ ಬಂದು ಡ್ರಗ್ಸ್​​​ ದಂಧೆ: ನೈಜೀರಿಯಾ ಪ್ರಜೆ ಅರೆಸ್ಟ್​​

Must read

ಬೆಂಗಳೂರು: ನಗರದಲ್ಲಿ ಸೆಲೆಬ್ರಿಟಿ ಕೊಕೋನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜೊವಾಚಿನ್ ಓನಿಬಿಚಿ ಬಂಧಿತ ಆರೋಪಿ.

ಜೊವಾಚಿನ್ ಓನಿಬಿಚಿ 2015ರಲ್ಲಿ ಹೆಪಟೈಟಿಸ್ ಖಾಯಿಲೆ ಕಾರಣ ಮೆಡಿಕಲ್ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ. ವೀಸಾ ಅವಧಿ‌ ಮುಗಿದಿದ್ದರೂ ಕೂಡ ತನ್ನ ದೇಶಕ್ಕೆ ವಾಪಸ್​​ ಆಗದ ಆರೋಪಿ ಬೆಂಗಳೂರಿನಲ್ಲಿ ಡ್ರಗ್​ ದಂಧೆ ಆರಂಭಿಸಿದ್ದಾನೆ.

ಜೊವಾಚಿನ್ ಓನಿಬಿಚಿ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ ರೂ‌ ಮೌಲ್ಯದ 75 ಗ್ರಾಂ ಸೆಲೆಬ್ರಿಟಿ ಕೊಕೇನ್ ಹಾಗೂ 200 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಕೆ.ಜಿ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article